The Kerala Story : ಸಿನಿಮಾ ಬ್ಯಾನ್ ಗೆ ಕೇರಳ ಸಿಎಂಗೆ ಮನವಿ..!!
ದಿ ಕೇರಳ ಸ್ಟೋರಿ ಸಿನಿಮಾ ಘೋಷಣೆಯಾದಾಗಿನಿಂದಲೂ ವಿವಾದಗಳಲ್ಲಿ ಸಿಲುಕಿಕೊಂಡಿದೆ..
ಇದೀಗ ಸಿನಿಮಾ ರಿಲೀಸ್ ಗೆ ರೆಡಿಯಾಗಿರುವ ಬೆನ್ನಲ್ಲೇ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೇರಳದ ಮುಖ್ಯಮಂತ್ರಿಗಳಿಗೆ ಹಲವರು ಮನವಿ ಮಾಡಿದ್ದಾರೆ.
ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.. ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಈ ಟೀಸರ್ ನಲ್ಲಿ ವಿವಾದಿತ ಅಂಶಗಳು ಇವೆ ಎಂದು ಹಲವರು ವಿರೋಧ ವ್ಯಕ್ತ ಪಡಿಸಿ ಆಕ್ರೋಶ ಹೊರಹಾಕಿದ್ದಾರೆ.
ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ ಎಂಬ ಸಂಭಾಷಣೆಯಿದ್ದು ಸಾಕಷ್ಟು ವಿವಾದಗಳನ್ನ ಸೃಷ್ಟಿಸಿದೆ..
ಇದರ ಜೊತೆಗೆ ಕೇರಳದಲ್ಲಿ ಮಹಿಳೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಭಯೋತ್ಪಾದನೆ ಚಟುವಟಿಕೆಗೆ ಹಚ್ಚುವ ಸಂಘಟನೆಗಳು ಇವೆ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದರಿಂದಾಗಿ ಕೇರಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ಇಂತಹ ಚಿತ್ರಗಳು ಬಿಡುಗಡೆಯಾದರೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಎಂತಹ ಕೆಟ್ಟ ಹೆಸರು ಬರಬಹುದು ಯೋಚಿಸಿ ಎಂದು ಹಲವು ರಾಜಕೀಯ ಮುಖಂಡರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನೂ ಈ ಸಿನಿಮಾವನ್ನು ಬ್ಯಾನ್ ಮಾಡುವ ಕುರಿತಾಗಿ ಮಾತನಾಡಿರುವ ಸಿನಿಮಾದ ನಿರ್ಮಾಪಕ ವಿಫುಲ್ ಶಾ, ನಾವು ಸಿನಿಮಾದಲ್ಲಿ ಯಾವುದನ್ನೂ ಸುಳ್ಳು ಹೇಳಿಲ್ಲ. ಎಲ್ಲದಕ್ಕೂ ನಮ್ಮ ಹತ್ತಿರ ಸಾಕ್ಷಿ ಇವೆ. ಯಾರೇ ಪ್ರಶ್ನೆ ಮಾಡಿದರೂ ನಾವು ಉತ್ತರಿಸುತ್ತೇವೆ. ನಿಮಗೆ ಬೇಕಾಗಿರುವ ಸಾಕ್ಷಿ ಏನು ಅಂತ ವಿವರಿಸಿ ಎಂದಿದ್ದಾರೆ. ಇದು ಸತ್ಯದ ದರ್ಶನವಾಗಿದ್ದರಿಂದ ಸರಕಾರ ಬ್ಯಾನ್ ಮಾಡುವಂತಹ ಯೋಚನೆ ಮಾಡಲಾರದು ಎಂದು ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.
The Kerala Story , request ban cinema