ಬೆಂಗಳೂರು: 2020ನೇ ಸಾಲಿನ ಎರಡನೇ ಹಾಗೂ ಕೊನೆಯ ಸೂರ್ಯಗ್ರಹಣ ಸೋಮವಾರ ಸಂಭವಿಸಲಿದ್ದು, ನಭೋ ಮಂಡಲದ ಕೌತುಕ ವೀಕ್ಷಿಸಲು ವಿಜ್ಞಾನಿಗಳು ಸಜ್ಜಾಗಿದ್ದಾರೆ. ಇದು ಸಂಪೂರ್ಣ ಸೂರ್ಯಗ್ರಹಣವಾಗಿದ್ದು, ಸುಮಾರು 2 ಗಂಟೆ 10 ನಿಮಿಷಗಳ ಕಾಲ ಸೂರ್ಯಗ್ರಹಣದ ಅನುಭವವಾಗಲಿದೆ.

ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ನಡೆಯುವ ಪ್ರಕೃತಿ ವಿಸ್ಮಯದ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುವುದು ತೀರಾ ಕಡಿಮೆ. ಕಾರಣ ಸೂರ್ಯಗ್ರಹಣ ಆರಂಭವಾಗುವುದೇ ಸಂಜೆ 7 ಗಂಟೆ 03 ನಿಮಿಷಕ್ಕೆ. ಸಂಜೆ 7 ಗಂಟೆಗೆ ಆರಂಭವಾಗುವ ಗ್ರಹಣದ ಮಧ್ಯರಾತ್ರಿ 12.23ಕ್ಕೆ ಮುಕ್ತಾಯವಾಗಲಿದೆ.
ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರ..!
ಭಾರತದಲ್ಲಿ ಈ ಸೂರ್ಯಗ್ರಹಣದ ಗೋಚರವಾಗುವುದಿಲ್ಲ. ಆದರೆ, ಚಿಲಿ, ಅರ್ಜೆಂಟೀನಾ, ಕೊಲರೊಡಾ, ವಿಲ್ಲಾರಿಕಾ, ಟೆಮುಕೋ ರಾಷ್ಟ್ರಗಳ ಕೆಲ ನಗರಗಳಲ್ಲಿ ಮಾತ್ರ ಸಂಪೂರ್ಣ ಸೂರ್ಯಗ್ರಹಣದ ಅನುಭವವಾಗಲಿದೆ.

ಪೆಸಿಫಿಕ್ ಮಹಾಸಾಗರ, ಅಂಟಾರ್ಟಿಕಾ ಹಾಗೂ ದಕ್ಷಿಣ ಅಮೇರಿಕಾದ ಭಾಗದಲ್ಲಿ ಭಾಗಶಃ ಸೂರ್ಯಗ್ರಹಣದ ಅನುಭವವಾಗಲಿದೆ. ಅಂದರೆ, ಚಿಲಿ ದೇಶದ ಸಾಂಟಿಯಾಗೋ, ಬ್ರಜಿಲ್‍ನ ಸಾ ಪೌಲೋ, ಅರ್ಜೆಂಟಿನಾದ ಬ್ಯೂನಸ್ ಐರಿಸ್, ಪೆರುವಿನ ಲಿಮಾದಲ್ಲಿ ಭಾಗಶಃ ಸೂರ್ಯಗ್ರಹಣವಾಗಲಿದೆ.
ಸಾಮಾನ್ಯವಾಗಿ ಒಂದು ವರ್ಷದಲ್ಲಿ ಎರಡು ಸೂರ್ಯಗ್ರಹಗಳು ಸಂಭವಿಸುತ್ತವೆ. ಆದರೆ, ಅದಕ್ಕಿಂತ ಹೆಚ್ಚು ಎಂದರೆ ಒಂದೇ ವರ್ಷದಲ್ಲಿ 5 ಸೂರ್ಯಗ್ರಹಗಳು ಆಗುತ್ತವೆ. ಆದರೆ, ಇದು ತೀರಾ ಅಪರೂಪ ಎನ್ನುತ್ತಾರೆ ಖಗೋಳ ವಿಜ್ಞಾನಿಗಳು.
ನಾಸಾ ವಿಜ್ಞಾನಿಗಳ ಪ್ರಕಾರ ಕಳೆದ 5 ಸಾವಿರ ವರ್ಷಗಳ ಅವಧಿಯಲ್ಲಿ 25 ವರ್ಷಗಳಲ್ಲಿ ಮಾತ್ರ 5 ಸೂರ್ಯಗ್ರಹಣಗಳು ಗೋಚರವಾಗಿವೆ. ಕಳೆದ ಶತಮಾನತದಲ್ಲಿ ಅಂದರೆ 1935ರಲ್ಲಿ 5 ಸೂರ್ಯಗ್ರಹಗಳು ಸಂಭವಿಸಿದ್ದವು. ಮುಂದೆ 2206ರಲ್ಲಿ ಒಂದೇ ವರ್ಷ 5 ಸೂರ್ಯಗ್ರಹಣಗಳು ಸಂಭವಿಸುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.
ಕಳೆದ ಜೂನ್ 21ರಂದು ಸಂಭವಿಸಿದ್ದ ಈ ವರ್ಷದ ಮೊದಲ ಸೂರ್ಯಗ್ರಹಣ ಬೆಂಗಳೂರು, ಮುಂಬೈ, ದೆಹಲಿ, ಕೊಲ್ಕೊತಾ ಸೇರಿದಂತೆ ಹಲವು ರಾಜ್ಯಗಳ ನಗರಗಳಲ್ಲಿ ಗೋಚರವಾಗಿತ್ತು.
ಆದರೆ, ನವೆಂಬರ್ 30ರಂದು ಚಂದ್ರಗ್ರಹಣ ಸಂಭವಿಸಿತ್ತು, ಮುಂದಿನ ಚಂದ್ರಗ್ರಹಣ 2021ರ ಮೇ.26ರಂದು ಸಂಭವಿಸಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








