ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಬಗ್ಗೆ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿವೆ.
ನಿರ್ದೇಶಕ ಸಾಕಷ್ಟು ವಿವಾದಗಳನ್ನೇ ತನ್ನ ಮೇಲೆ ಎಳೆದುಕೊಂಡಿರುತ್ತಾರೆ.ಈಗ ಮತ್ತೊಂದು ವಿವಾದಾತ್ಮಕ ಕಾರ್ಯಕ್ಕೆ ನಿರ್ದೇಶಕ ಮುಂದಾಗಿದ್ದು, ಅವರ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೇ, ವರ್ಮಾ ತಲೆಗೆ 1 ಕೋಟಿ ಬಹುಮಾನ ಸಹ ಘೋಷಿಸಲಾಗಿದೆ.
ರಾಮ್ ಗೋಪಾಲ್ ವರ್ಮಾ, ‘ವ್ಯೂಹಂ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದು, ಆ ಚಿತ್ರದಲ್ಲಿ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿ ಚಿತ್ರಿಸಿದ್ದಾರೆ ಎಂಬ ಕಾರಣಕ್ಕೆ ಟಿಡಿಪಿ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ ನಾಯ್ಡು, ‘‘ರಾಮ್ ಗೋಪಾಲ್ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ, ಅವರ ವಿಡಿಯೋ ಹೇಳಿಕೆ ಹಂಚಿಕೊಂಡಿರುವ ವರ್ಮಾ, ಟಿವಿ ಚಾನೆಲ್ ಮಾಲೀಕನ ವಿರುದ್ಧ ದೂರು ದಾಖಲಿಸಲಿದ್ದೇನೆ’’ ಎಂದು ಟ್ವೀಟ್ ಮಾಡಿದ್ದಾರೆ.