ಸಿಯೋಲ್: ವ್ಯಕ್ತಿಯೊಬ್ಬ ವಿಪಕ್ಷ ನಾಯಕನ ಕುತ್ತಿಗೆಗೆ ಚಾಕು ಹಾಕಿರುವ ಘಟನೆಯೊಂದು ನಡೆದಿದೆ.
ದಕ್ಷಿಣ ಕೊರಿಯಾದ (South Korea) ವಿರೋಧ ಪಕ್ಷದ ನಾಯಕ ಲೀ ಜೇ-ಮ್ಯುಂಗ್ (59) ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಹಠಾತ್ ದಾಳಿ ನಡೆಸಿ ಚಾಕುವಿನಿಂದ ದಾಳಿ ನಡೆಸಿದ್ದಾನೆ.
ಹಲ್ಲೆ ನಡೆಸಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲಿದ್ದ ಜನರು ಸಹಾಯಕ್ಕೆ ಧಾವಿಸುತ್ತಿದ್ದಂತೆ ನೆಲಕ್ಕೆ ಕುಸಿದು ಬೀಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಕೂಡಲೇ ಸ್ಥಳೀಯರು ವಿಪಕ್ಷ ನಾಯಕನ ಕುತ್ತಿಗೆಯ ಮೇಲೆ ಕರವಸ್ತ್ರ ಒತ್ತಿ ರಕ್ತ ಸೋರುವುದನ್ನು ತಡೆಯಲು ಯತ್ನಿಸಿದ್ದಾರೆ.
ತಕ್ಷಣ ಮ್ಯುಂಗ್ ಅವರನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಪೊಲೀಸರು ದಾಳಿ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ ಎಂದು ಲೀ ಅವರ ಡೆಮಾಕ್ರಟಿಕ್ ಪಕ್ಷದ ಸಂಸದ ಕ್ವಾನ್ ಚಿಲ್-ಸಿಯುಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.








