ದೇವನಹಳ್ಳಿ: 200ಕ್ಕೂ ಅಧಿಕ ದಾಳಿಂಬೆ ಗಿಡಗಳನ್ನು ದುಷ್ಕರ್ಮಿಗಳು ನಾಶ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ. ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹ್ಯಾಡಾಳ ಎಂಬಲ್ಲಿ ನಡೆದಿದೆ. ಗ್ರಾಮದ ವೆಂಕಟೇಗೌಡ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಗಿಡಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಒಂದೂವರೆ ವರ್ಷದಿಂದ ಬೆಳೆದಿದ್ದ ದಾಳಿಂಬೆ ಗಿಡಗಳನ್ನು ಪಾಪಿಗಳು ಬುಡದ ಸಮೇತ ಕಿತ್ತು ಹಾಕಿದ್ದಾರೆ.
ತೋಟದ ಮಾಲೀಕರು ಸುಮಾರು 6 ಲಕ್ಷ ರೂ. ಬಂಡವಾಳದಲ್ಲಿ ದಾಳಿಂಬೆ ಬೆಳೆಸಿದ್ದರು. ಆದರೆ, ಕಿಡಿಗೇಡಿಗಳು ರಾತ್ರಿ ವೇಳೆ ನುಗ್ಗಿ ಮಚ್ಚಿನಿಂದ ಬುಡಗಳ ಸಮೇತ ಕತ್ತರಿಸಿ ಅಟ್ಟಹಾಸ ಮೆರೆದಿದ್ದಾರೆ. ಇದರಿಂದಾಗಿ ರೈತ ಕಂಗಾಲಾಗಿದ್ದಾರೆ.