ಉಡುಪಿ: ನಾಪತ್ತೆಯಾಗಿದ್ದ ಮುಖ್ಯ ಪೇದೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಈ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಪುಲ್ಕೇರಿ ಗ್ರಾಮದಲ್ಲಿ ನಡೆದಿದೆ. ಪುಲ್ಕೇರಿ ಹತ್ತಿರದ ಬಾವಿಯಲ್ಲಿ ಶೃತಿನ್ ಶೆಟ್ಟಿ(35) ಶವವಾಗಿ ಪತ್ತೆಯಾಗಿರುವ ಹೆಡ್ ಕಾನ್ಸ್ ಟೇಬಲ್ ಎನ್ನಲಾಗಿದೆ. ಇವರು ಕಾರ್ಕಳ ನಗರ ಠಾಣೆ ಹೆಡ್ ಕಾನ್ಸ್ಟೇಬಲ್ ಆಗಿದ್ದರು.
ಹೆಡ್ ಕಾನ್ಸ್ ಟೇಬಲ್ ಅ.19ರಂದು ನಾಪತ್ತೆಯಾಗಿದ್ದರು ಎನ್ನಲಾಗಿದ್ದು, ಪೊಲೀಸರು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದರು. ಇವರು ಅಕ್ಟೋಬರ್ 18ರಂದು ರಜೆಯ ಮೇಲೆ ತೆರಳಿದ್ದರು ಎನ್ನಲಾಗಿದೆ.