ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ರಾಜ್ಯಕ್ಕೆ ಕೊರೊನಾ ವಕ್ಕರಿಸಿ ಒಂದೂವರೆ ತಿಂಗಳು ಕಳೆದ ಬಳಿಕವೂ ಬೆರಳೆಣಿಕೆಯಷ್ಟಿದ್ದ ಸೋಂಕಿತರ ಸಂಖ್ಯೆ ಇದೀಗ ನಾಲ್ಕೈದು ಪಟ್ಟು ಹೆಚ್ಚಾಗಿದೆ.
ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸತತ ನಾಲ್ಕು ದಿನಗಳಲ್ಲಿ 100ಕ್ಕೂ ಅಧಿಕ ಕೊರೊನಾ ಸೋಕು ಕೇಸ್ ಗಳು ಪತ್ತೆಯಾಗಿವೆ.
ಹಾಗಾದ್ರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಪ್ರದೇಶಗಳು ಯಾವುವು ಎಂಬುವುದನ್ನ ನೋಡೋದಾದ್ರೆ..
ಪಾದರಾಯನಪುರದಲ್ಲಿ-70
ವಿವಿಪುರಂನಲ್ಲಿ-45
ಎಸ್‌ಕೆ ಗಾರ್ಡನ್‌ನಲ್ಲಿ-23
ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ-22
ಮಂಗಮ್ಮನಪಾಳ್ಯದಲ್ಲಿ-16
ಕೆಆರ್ ಮಾರುಕಟ್ಟೆಯಲ್ಲಿ 14 ಪ್ರಕರಣಗಳಿವೆ.
ಇನ್ನು ಇದುವರೆಗೂ ನಗರದಲ್ಲಿ ಒಟ್ಟು 80,022 ಮಂದಿಯ ಪರೀಕ್ಷೆ ನಡೆಸಲಾಗಿದ್ದು, ಒಟ್ಟು 502 ಕಂಟೈನ್ಮೆಂಟ್ ಜೋನ್‌ಗಳಿವೆ. 458 ಕಂಟೈನ್ಮೆಂಟ್ ಜೋನ್‌ಗಳಲ್ಲಿ ಪ್ರಕರಣ ಸಕ್ರಿಯವಾಗಿವೆ. ಪಾಸಿಟಿವಿಟಿ ಪ್ರಮಾಣ ಶೇ.1.88ರಷ್ಟಿದೆ, ಶೇ.68 ಪ್ರಕರಣಗಳು ಸಕ್ರಿಯವಾಗಿವೆ. ಶೇ.32ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ.