ಮ್ಯಾಕ್ಸ್ ಸಿನಿಮಾದ ಪ್ರೀ ಕ್ಲೈಮ್ಯಾಕ್ಸ್ ಫೋಟೋ (Photo leak) ವೈರಲ್ ಆಗಿದ್ದು, ಇದನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.
ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆವಿನ್ ಸಾಹಸ ನಿರ್ದೇಶನದ ದೃಶ್ಯದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಲಾಗಿದೆ. ಅದು ವೈರಲ್ ಕೂಡ ಆಗಿದೆ. ಮ್ಯಾಕ್ಸ್ ಚಿತ್ರದ ಶೂಟಿಂಗ್ ಮುಗಿಯುತ್ತಿದ್ದಂತೆ ಕಿಚ್ಚನ ಸಿನಿಮಾಗಾಗಿ ಅಭಿಮಾನಿಗಳು ಚಿಂತಿಸುತ್ತಿದ್ದರು.
ಆದರೆ, ಸುದೀಪ್ (Sudeep) ಕೈಯಲ್ಲಿ ಸದ್ಯ ನಾಲ್ಕೈದು ಚಿತ್ರಗಳಿವೆ. ಆದರೆ, ಮ್ಯಾಕ್ಸ್ ನಂತರ ಯಾವ ಚಿತ್ರದ ಶೂಟಿಂಗ್‌ಗೆ ಸುದೀಪ್ ಹೋಗಲಿದ್ದಾರೆ ಅನ್ನೋದು ಅಭಿಮಾನಿಗಳ ಕಾತರಕ್ಕೆ ಕಾರಣವಾಗಿದೆ. ಮ್ಯಾಕ್ಸ್ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದೆ. ಮ್ಯಾಕ್ಸ್ ಮುಗಿಯುತ್ತಿದ್ದಂತೆ ಅನೂಪ್ ಭಂಡಾರಿ ಚಿತ್ರದಲ್ಲಿ ಕಿಚ್ಚ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸದ್ಯದ ಮಾಹಿತಿಯಂತೆ ಅದು ಕೂಡ ಸುಳ್ಳಾಗಿದೆ. ತಮಿಳು ನಿರ್ದೇಶಕ ಚರಣ್ (Charan) ಜೊತೆಗಿನ ಚಿತ್ರ ಮುಗಿದ ಮೇಲೆ ಅನೂಪ್ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಸುದೀಪ್ ಎನ್ನಲಾಗುತ್ತಿದೆ.