ತಹಶೀಲ್ದಾರ್ ಕಚೇರಿಯಲ್ಲೇ ವ್ಯಕ್ತಿಯೋರ್ವನ ಕೊಲೆ
ಹೈದರಾಬಾದ್: ತಹಶೀಲ್ದಾರ್ ಕಚೇರಿಯಲ್ಲೇ ವ್ಯಕ್ತಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹೈದರಾಬಾದ್ನ ಸರೂರ್ನಗರ ಲ್ಲಿ ನಡೆದಿದೆ.
ಮೃತದುರ್ದೈವಿಯನ್ನು ನಾಗರಾಜ್(25) ಮೃತ ದುರ್ದೈವಿ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಸರೂರನಗರ ತಹಸೀಲ್ದಾರ್ ಕಚೇರಿಗೆ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ನಾಗರಾಜ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಕುಟುಂಬಸ್ಥರು ನಾಗರಾಜ್ ಕೊಲೆಯ ಹಿಂದೆ ಪತ್ನಿಯ ಮನೆಯವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ನಡೆದಿದ್ದೇನು?: ನಾಗರಾಜ್ ಹಿಂದುವಾಗಿದ್ದು, 23 ವರ್ಷದ ಸೈಯದ್ ಅಶ್ರಿನ್ ಸುಲ್ತಾನಾ ಮುಸ್ಲಿಂ ಹುಡುಗಿಯಾಗಿದ್ದಾಳೆ. ಇವರಿಬ್ಬರು ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದರು. ಎರಡು ತಿಂಗಳ ಹಿಂದೆ ಜನವರಿ 31 ರಂದು ಹಳೆ ನಗರದ ಆರ್ಯ ಸಮಾಜ ಮಂದಿರದಲ್ಲಿ ಮದುವೆಯಾಗಿದ್ದರು.
ಮದುವೆಯಾದ ಮೇಲೆ ಸೈಯದ್ ಅಶ್ರಿನ್ ಸುಲ್ತಾನಾ ಹೆಸರನ್ನು ಪಲ್ಲವಿ ಎಂದು ಹೆಸರು ಬದಲಾಯಿಸಲಾಗಿತ್ತು. ಬಿಲ್ಲಾಪುರಂ ನಾಗರಾಜು ಸಿಕಂದರಾಬಾದ್ನ ಮರ್ರೆಡ್ಪಲ್ಲಿ ನಿವಾಸಿಯಾಗಿದ್ದು, ಓಲ್ಡ್ ಸಿಟಿಯ ಮಲಕ್ಪೇಟ್ನಲ್ಲಿರುವ ಜನಪ್ರಿಯ ಕಾರ್ ಶೋ ರೂಂನಲ್ಲಿ ಸೇಲ್ಸ್ಮ್ಯಾನ್ ಕಾರ್ಯನಿರ್ವಹಿಸುತ್ತಿದ್ದರು
ಇಬ್ಬರು ಬೇರೆ, ಬೇರೆ ಧರ್ಮದವರಾಗಿದ್ದರಿಂದ ಪಲ್ಲವಿ ಮನೆಯವರು ನಾಗರಾಜ್ನನ್ನು ಕೊಂದಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ಈ ಘಟನೆಯ ಬಳಿಕ ಮೃತನ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡುವಂತೆ ಮತ್ತು ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ಒತ್ತಾಯಿಸುತ್ತಿದೆ.








