ಪಾಕಿಸ್ತಾನದ ಮುಸಲ್ಮಾನರನ್ನು ಹಿಂದೂಗಳಾಗಿ ಪರಿವರ್ತನೆ ಮಾಡಬೇಕು : ತೇಜಸ್ವಿ ಸೂರ್ಯ Tejaswi Surya saaksha tv
ಉಡುಪಿ : ಪಾಕಿಸ್ತಾನದ ಮುಸಲ್ಮಾನರನ್ನು ಹಿಂದೂಗಳಾಗಿ ಪರಿವರ್ತನೆ ಮಾಡಬೇಕು.
ಇದಕ್ಕೆ ಮಠ, ದೇವಸ್ಥಾನ ಮುಂದಾಳತ್ವ ವಹಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಹಿಂದೂ ಸಂಸ್ಕೃತಿ, ಸಮಾಜ ಉಳಿಯಬೇಕಾದರೆ ಹಿಂದೂ ಧರ್ಮ ಉಳಿಯಬೇಕು.
ಹೀಗಾಗಿ ಮತಾಂತರಗೊಂಡು ಬೇರೆ ದೇಶಕ್ಕೆ ಹೋದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಬೇಕು.
ಮುಸ್ಲಿಮರು, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಟಿಪ್ಪು ವಿರುದ್ಧ ಕಿಡಿಕಾರಿದ ತೇಜಸ್ವಿ ಸೂರ್ಯ, ಟಿಪ್ಪುವಿನ ಖಡ್ಗದಿಂದಾಗಿ ಬಹಳ ಮತಾಂತರಗಳಾಗಿವೆ.
ಇದರಿಂದಾಗಿ ಟಿಪ್ಪು ಜಯಂತಿಯಂದೇ ನಾವು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಬೇಕು.
ನಮ್ಮ ಮನೆಯ ಅಕ್ಕಪಕ್ಕ, ಗ್ರಾಮ, ಊರುಗಳಲ್ಲಿ ಘರ್ ವಾಪಸಿ ಮಾಡಬೇಕು ಎಂದು ಕರೆಕೊಟ್ಟರು.









