ADVERTISEMENT
Monday, March 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್

The Mythology of Gejjegiri

Shwetha by Shwetha
February 4, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ಗೆಜ್ಜೆಗಿರಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಒಂದು ಐತಿಹಾಸಿಕ ಸ್ಥಳವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಸುಮಾರು 22ಕಿ.ಮೀ ದೂರದಲ್ಲಿದೆ. ತುಳುನಾಡಿನ ಅವಳಿ ವೀರರಾದ ಕೋಟಿಚೆನ್ನಯರ ತಾಯಿ ದೇಯಿಬೈದ್ಯೆತಿಗೆ ಪುನರ್ ಜೀವನ ನೀಡಿದ ಮನೆಯೇ ಗೆಜ್ಜೆ ಗಿರಿ ನಂದನ ಬಿತ್ತಿಲ್ ಕ್ಷೇತ್ರ.

Related posts

vvs lakshman and rahul dravid

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

March 16, 2026
ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ

ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ

March 14, 2026

ಹಿಂದಿನ ಕಾಲದ ಸಂಪ್ರದಾಯದಂತೆ ಮದುವೆಗೆ ಮೊದಲೇ ಮೈನೆರೆದ ಜೇವು ಕೇದಗೆ ಎನ್ನುವ ಹೆಣ್ಣು ‌ಮಗಳನ್ನು ಅವಳ ಮನೆಯವರು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಲ್ಲಿ ಬಿಡಲು ಆಕೆ ಮೂರ್ತೆ ಕೆಲಸಕ್ಕಾಗಿ ಕಾಡಿಗೆ ಹೋದ ಸಾಯನ ಬೈದ್ಯರ ಕಣ್ಣಿಗೆ ಬೀಳುತ್ತಾಳೆ. ಪ್ರತಿಷ್ಠಿತ ಏರಾಜೆ ಬರ್ಕೆ ಮನೆತನದ ಗುರಿಕಾರರಾದ ಸಾಯನ ಬೈದ್ಯರು ಆಕೆಯನ್ನು ತಂಗಿಯಾಗಿ ಸ್ವೀಕರಿಸಿ ದೇಯಿ ಎಂದು ಹೆಸರಿಟ್ಟು, ಸಾಕಿ ಸಲಹಿ ನಾಟಿ ವೈದ್ಯ ವಿದ್ಯೆಯನ್ನು ಕಲಿಸುತ್ತಾರೆ. ಮುಂದೆ ಅವಳನ್ನು ತನ್ನ ಬಾವನಾದ ಕಾಂತಣ್ಣ ಬೈದ್ಯರಿಗೆ ಕೊಟ್ಟು ವಿವಾಹ ಮಾಡಿಸುತ್ತಾರೆ.ಹೀಗೆ ದೇಯಿಬೈದ್ಯೆತಿಗೆ ಆಶ್ರಯ ನೀಡಿ ಸಕಲ ನಾಟಿವಿದ್ಯೆ ಪಾರಂಗತೆಯನ್ನಾಗಿ ಮಾಡಿ ಹೊಸ ಬದುಕು ನೀಡಿದ ಮನೆಯೇ ಗೆಜ್ಜೆ ಗಿರಿ ನಂದನ ಬಿತ್ತಿಲ್ ( ಬಿತ್ತಿಲ್ ಎಂದರೆ ಕನ್ನಡದಲ್ಲಿ ಹಿತ್ತಲು) ಮನೆ.

ದೇಯಿಬೈದ್ಯೆತಿ ಏಳು ತಿಂಗಳ ಬಸುರಿಯಾಗಿದ್ದಾಗ ಬೇಟೆಯಾಡಲು ‌ಕಾಡಿಗೆ ಹೋದ ಪಡುಮಲೆ ಬಲ್ಲಾಳರ ಕಾಲಿಗೆ ವಿಷದ ಮುಳ‍್ಳುತಾಗಿ ಜೀವನ್ಮರಣ ಸ್ಥಿತಿಯಲ್ಲಿ ನೋವಿನಿಂದ ಒದ್ದಾಡುತ್ತಾರೆ. ಯಾವ ಚಿಕಿತ್ಸೆಯೂ ಫಲಕಾರಿಯಾಗದೆ ಇರಲು ಬಲ್ಲಾಳರು ಬಸುರಿ ದೇಯಿಬೈದ್ಯೆತಿಯನ್ನು ಕರೆತರಲು ದಂಡಿಗೆಯನ್ನು ಕಳುಹಿಸುತ್ತಾರೆ. ದೇಯಿಬೈದ್ಯೆತಿ ಪಡುಮಲೆಯ ಅರಸು ಬಲ್ಲಾಳರಿಗೆ ನಾಟಿ ಚಿಕಿತ್ಸೆ ನೀಡಿ ಜೀವ ಉಳಿಸುತ್ತಾಳೆ. ಬಲ್ಲಾಳ ಅರಸು ಗುಣಮುಖನಾದ ಕಾರಣ ದೇಯಿಬೈದ್ಯೆತಿ ತನ್ನ ಗೆಜ್ಜೆ ಗಿರಿ ನಂದನ ಬಿತ್ತಿಲ್ ಮನೆಗೆ ಹೊರಟು ನಿಲ್ಲುತ್ತಾಳೆ.

ಕೆಲವು ಹೆಜ್ಜೆ ದೂರ ಸಾಗಿದಾಗ ದೇಯಿಬೈದ್ಯೆತಿಗೆ ಹೆರಿಗೆ ನೋವು ಕಾಣಿಸಿಕೊಳ್ಳಲು ಪಡುಮಲೆಯ ಅರಸು ಬೀಡಿಗೆ ಕರೆತಂದು ಅಲ್ಲೇ ಹೆರಿಗೆಗೆ ವ್ಯವಸ್ಥೆ ಮಾಡಿಸುತ್ತಾನೆ. ಪಡುಮಲೆ ಬೀಡಿನಲ್ಲಿ ದೇಯಿಬೈದ್ಯೆತಿ ಅವಳಿ ಮಕ್ಕಳಾದ ಕೋಟಿ ಚೆನ್ನಯರಿಗೆ ಜನ್ಮ ನೀಡುತ್ತಾಳೆ. ಆದರೆ ಹೆರಿಗೆಯಾಗಿ 16ನೇ ದಿನ ದೇಯಿಬೈದ್ಯೆತಿ ಬೀಡಿನ ಸಮೀಪದ ಕೆರೆಯಲ್ಲಿ ಆಕಸ್ಮಿಕ ಮರಣ ಹೊಂದುತ್ತಾಳೆ. ವಿಷಯ ತಿಳಿದ ಅಣ್ಣ ಸಾಯನಬೈದ್ಯರು ದೇಯಿಬೈದ್ಯೆತಿಯ ಕಳೇಬರವನ್ನು ಗೆಜ್ಜೆಗಿರಿಗೆ ತಂದು ಸಮಾಧಿ ಮಾಡಿದ್ದು ಇದಕ್ಕೆ ಸುಮಾರು 450 ವರ್ಷಗಳ ಇತಿಹಾಸವಿದೆ. ಸಾಯನ ಬೈದ್ಯರು ಕೋಟಿಚೆನ್ನಯ್ಯರನ್ನು ಸಾಕಿ ಬೆಳೆಸಿದ ಮನೆಯನ್ನು “ಗೆಜ್ಜೆಗಿರಿ ನಂದನ ಬಿತ್ತಿಲ್” ಎಂದು ಕರೆಯಲಾಗುತ್ತದೆ.

ಮುಂದೆ ಕೋಟಿ-ಚೆನ್ನಯರು ಮಾವನ ಮನೆಯಾದ ಗೆಜ್ಜೆಗಿರಿಯಲ್ಲೇ ಬೆಳೆದು ದೊಡ್ಡವರಾಗುತ್ತಾರೆ. ಗೆಜ್ಜೆಗಿರಿ ನಂದನ ಬಿತ್ತಿಲ್ ಮನೆ ಕೋಟಿ-ಚೆನ್ನಯರು ಆಟವಾಡಿ, ವಿದ್ಯೆಕಲಿತು ಪರಾಕ್ರಮಿಗಳಾಗಿ ಕಾರಣಿಕ ಪುರುಷರಾಗಿ ಹೊರಹೊಮ್ಮುತ್ತಾರೆ.

ಗೆಜ್ಜೆಗಿರಿ ನಂದನ ಬಿತ್ತಿಲ್, ಏರಾಜೆ ಬಾರಿಕೆ ಎಂಬ ಬಿಲ್ಲವ ಮನೆತನದ ನೆಲವಾಗಿದೆ. ಪಡುಮಲೆ ಬಲ್ಲಾಳ ಅರಸರ ವ್ಯಾಪ್ತಿಯಲ್ಲಿದ್ದ ನಾಲ್ಕು ಗುತ್ತು ಮತ್ತು ಎಂಟು ಬಾರಿಕೆಗಳಲ್ಲಿ ಏರಾಜೆ ಬಾರಿಕೆ ಒಂದು. ಅರಸನಿಗೆ ಆಡಳಿತದಲ್ಲಿ ನೆರವಾಗುತ್ತಿದ್ದ ಮನೆತನವಿದು.


ಈಗ ಗೆಜ್ಜೆಗಿರಿ ನಂದನ ಬಿತ್ತಿಲ್ ಮನೆಯಲ್ಲಿ ಸಾಯನ ಬೈದ್ಯರು, ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ಆರಾಧನೆ ನಡೆಯುತ್ತಿದೆ. ಈ ಮೂರು ಕಾರಣೀಕ ಶಕ್ತಿಗಳು ಅವತಾರ ರೂಪದಲ್ಲಿ ಬದುಕಿದ್ದಾಗ ವಾಸಿಸುತ್ತಿದ್ದ ಮನೆ ಈಗ ಸತ್ಯ ಧರ್ಮ ಚಾವಡಿಯಾಗಿ ಪುನರುತ್ಥಾನಗೊಂಡಿದೆ. ಜೊತೆಗೆ ಈ ಶಕ್ತಿಗಳು ಬದುಕಿದ್ದಾಗ ನಂಬಿಕೊಂಡಿದ್ದ ಧರ್ಮ ದೈವ ಧೂಮಾವತಿಯ ಉಪಾಸನೆ, ನಾಗಾರಾಧನೆ, ಸಪರಿವಾರ ದೈವಗಳ ಉಪಾಸನೆಯೂ ಇಲ್ಲಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಇಲ್ಲಿ ಪ್ರತಿವರ್ಷ ನಡೆಯುವ ದೈವದ ಜಾತ್ರೆ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ.

ನೇಮದ ಧಾರ್ಮಿಕ ಪ್ರಕ್ರಿಯೆ: ದೈವವನ್ನು ಪ್ರಾರ್ಥಿಸಲು ಹೋಮ, ವಾದ್ಯಗಳು, ಮತ್ತು ವಿಶೇಷ ಪಡ್ದಾನ ಹಾಡುಗಳು ನಡೆಯುತ್ತವೆ.

ದೈವದ ಪಾತ್ರಧಾರಿಯು ನೃತ್ಯ ಮಾಡುವಾಗ ದೈವವು ಅವನಿಗೆ ಪ್ರತ್ಯಕ್ಷವಾಗುತ್ತದೆ ಎಂಬ ನಂಬಿಕೆ ಇಲ್ಲಿದೆ.

ಭಕ್ತರು ತಮ್ಮ ಸಂಕಷ್ಟಗಳನ್ನು ನಿವಾರಿಸಲು ದೈವದ ಮುಂದೆ ಪ್ರಾರ್ಥನೆ ಸಲ್ಲಿಸುತ್ತಾರೆ.

ದೇಯಿ ಬೈದ್ಯೆತಿ ಪ್ರಸಿದ್ಧ ನಾಟಿ ವೈದ್ಯೆಯಾಗಿದ್ದು, ಜನರಿಗೆ ನಾಟಿ ಔಷಧಿ ಸೇವೆಯನ್ನು ನೀಡುತ್ತಿದ್ದಳು. ಅದರ ನೆನಪಿಗಾಗಿ ದೇಯಿ ಬೈದೆತಿ ಔಷಧ ವನವೂ ಇಲ್ಲಿ ನಿರ್ಮಾಣಗೊಂಡಿದೆ.

ಸಾಯನ ಬೈದ್ಯರು ದೇಯಿಯ ಮೃತ ದೇಹವನ್ನು ಗೆಜ್ಜೆಗಿರಿಗೆ ತಂದು ಸಮಾಧಿ ಮಾಡಿದ ಸ್ಥಳವನ್ನು ಇಂದು “ಮಹಾ ಮಾತೆ ದೇಯಿ ಬೈದ್ಯೆತಿ ಸಮಾಧಿ” ಎಂದು ಕರೆಯಲಾಗುತ್ತದೆ.


ಈ ಸ್ಥಳದಲ್ಲಿ ಕೋಟಿಚೆನ್ನಯ್ಯರ ಬಾಲ್ಯದ ನೆನಪುಗಳಿದ್ದು, ಅವರ ಜೀವನ ಮತ್ತು ಪರಾಕ್ರಮವನ್ನು ಸ್ಮರಿಸಲು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಗೆಜ್ಜೆಗಿರಿ ನಂದನ ಬಿತ್ತಿಲ್, ಕೋಟಿಚೆನ್ನಯ್ಯನವರ ಇತಿಹಾಸವನ್ನು ಅಧ್ಯಯನ ಮಾಡಲು ಮಹತ್ವದ ಸ್ಥಳವಾಗಿದೆ.

ಈ ರೀತಿಯಾಗಿ, ಗೆಜ್ಜೆಗಿರಿ ಸ್ಥಳವು ತುಳುನಾಡಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ShareTweetSendShare
Join us on:

Related Posts

vvs lakshman and rahul dravid

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

by admin
March 16, 2026
0

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..! ಅದು 2001. ಮಾರ್ಚ್ 15. ಭಾರತ - ಆಸ್ಟ್ರೇಲಿಯಾ ನಡುವಿನ...

ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ

ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ

by Shwetha
March 14, 2026
0

ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ 45 ನಾವಿಕರ ಮೃತದೇಹಗಳನ್ನು ಶ್ರೀಲಂಕಾ ಸರ್ಕಾರವು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸಿದೆ. ಈ ಘಟನೆ ಹಿಂದೂ...

ಹೋಟೆಲ್ ಬಿಲ್‌ನಲ್ಲಿ GST ಜೊತೆ ‘ಗ್ಯಾಸ್ ಶುಲ್ಕ’ ಸೇರಿಕೆ!

ಹೋಟೆಲ್ ಬಿಲ್‌ನಲ್ಲಿ GST ಜೊತೆ ‘ಗ್ಯಾಸ್ ಶುಲ್ಕ’ ಸೇರಿಕೆ!

by Shwetha
March 14, 2026
0

ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ಹೋಟೆಲ್‌ಗಳು ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಯುದ್ಧದ ಪರಿಣಾಮವಾಗಿ ಸಿಲಿಂಡರ್‌ಗಳ...

ಇರಾನ್ ಯುದ್ಧದ ಎಫೆಕ್ಟ್: ಪೆಟ್ರೋಲ್ ಡೀಸೆಲ್ ಸೇಫ್, ಆದರೆ ಗ್ಯಾಸ್ ಸಿಲಿಂಡರ್ ಗಾಗಿ ಮುಗಿಬಿದ್ದ ಜನತೆ

ಇರಾನ್ ಯುದ್ಧದ ಎಫೆಕ್ಟ್: ಪೆಟ್ರೋಲ್ ಡೀಸೆಲ್ ಸೇಫ್, ಆದರೆ ಗ್ಯಾಸ್ ಸಿಲಿಂಡರ್ ಗಾಗಿ ಮುಗಿಬಿದ್ದ ಜನತೆ

by Shwetha
March 14, 2026
0

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧ ಹಾಗೂ ಇರಾನ್ ದೇಶವು ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ...

ರಾಜ್ಯಾದ್ಯಂತ ಮಾರ್ಚ್ 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಮಹಾಪರ್ವ ಆರಂಭ: ವಿದ್ಯಾರ್ಥಿಗಳು ಮತ್ತು ಪೋಷಕರು ತಿಳಿಯಲೇಬೇಕಾದ ಕಟ್ಟುನಿಟ್ಟಿನ ನಿಯಮಗಳೇನು ಗೊತ್ತಾ?

ರಾಜ್ಯಾದ್ಯಂತ ಮಾರ್ಚ್ 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಮಹಾಪರ್ವ ಆರಂಭ: ವಿದ್ಯಾರ್ಥಿಗಳು ಮತ್ತು ಪೋಷಕರು ತಿಳಿಯಲೇಬೇಕಾದ ಕಟ್ಟುನಿಟ್ಟಿನ ನಿಯಮಗಳೇನು ಗೊತ್ತಾ?

by Shwetha
March 14, 2026
0

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಅಧಿಕೃತ ಚಾಲನೆ ನೀಡಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram