ವಾರದ ಹಿಂದೆ 19ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದ ಸ್ವಾಮೀಜಿ ಹೊಸ ಗೆಟಪ್ ನಲ್ಲಿ ಪ್ರತ್ಯಕ್ಷರಾಗಿ ಭಕ್ತರನ್ನು ಅಚ್ಚರಿ ಪಡಿಸಿದರು.
ಕೋಲಾರದ ಹೊಳಲಿ ಸೇವಾಶ್ರಮದ ಪೀಠಾಧಿಪತಿಯಾಗಿರುವ ದತ್ತಾತ್ರೇಯ ಅವಧೂತ ಸ್ವಾಮೀಜಿ ಮಠ ಕಟ್ಟಿ ಲೋಕಕಲ್ಯಾಣ ಮಾಡುತ್ತೇನೆಂದು ಭಕ್ತರನ್ನು ನಂಬಿಸಿದ್ದರು.
ಗಡ್ಡ, ಮೀಸೆ ಬಿಟ್ಟು ಕಾವಿ ತೊಟ್ಟು ಸರ್ವ ಸಂಗ ಪರಿತ್ಯಾಗಿಗಳಂತೆ ಕಾಣುತ್ತಿದ್ದ ಅವರು, ಕಳೆದ ತಿಂಗಳು ಫೆ.27ರಂದು ಗ್ರಾಮದ 19 ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದರು.
ಹುಡುಗಿ ನಾಪತ್ತೆಯಾದ ಬಗ್ಗೆ ಜಿಲ್ಲಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುವತಿ ಕುಟುಂಬದವರು ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲಿ ಯುವತಿಯ ಸಹೋದರನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸ್ವಾಮೀಜಿ ನಿಮ್ಮ ಹುಡುಗಿಯನ್ನು ತಿರುಪತಿಯಲ್ಲಿ ಮದುವೆಯಾಗಿದ್ದೇನೆ. ಮನೆಗೆ ಬಂದು ಮಾತನಾಡೋಣ. ಪೊಲೀಸರಿಗೆ ದೂರು ಕೊಡಬೇಡಿ ಎಂದು ಕೇಳಿಕೊಂಡಿದ್ದರು.
ಆದರೆ ದೂರು ದಾಖಲಾದ ಹಿನ್ನೆಲೆಯಲ್ಲಿ ಇಂದು ಪೊಲೀಸ್ ಠಾಣೆಗೆ ಹೇಳಿಕೆ ನೀಡಲು ಆಗಮಿಸಿದ ಸ್ವಾಮೀಜಿ, ಗಡ್ಡ, ಮೀಸೆ ತೆಗೆಸಿ, ಪ್ಯಾಂಟ್ ಶರ್ಟ್ ತೊಟ್ಟು ಹೊಸ ಲುಕ್ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ಕಾಂಗ್ರೆಸ್ ಜನಪ್ರಿಯತೆ ಕಂಡು ಕೇಂದ್ರಕ್ಕೆ ಹೊಟ್ಟೆಕಿಚ್ಚು:ಸತೀಶ್ ಜಾರಕಿಹೊಳಿ ಇಡಿ ದಾಳಿ ಕೇವಲ ಆರಂಭವಷ್ಟೇ ನನ್ನ ಮತ್ತು ಡಿಕೆಶಿ ಮೇಲೆ ದಾಳಿ ಗ್ಯಾರಂಟಿ ಎಂದ ಪ್ರಿಯಾಂಕ್ ಖರ್ಗೆ
ರಾಜ್ಯ ರಾಜಕಾರಣದಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಈಗ ಹೊಸ ಸಂಚಲನ ಮೂಡಿಸಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಬೆನ್ನಲ್ಲೇ ಈಗ ಮತ್ತಷ್ಟು ಕಾಂಗ್ರೆಸ್ ಸಚಿವರ ಮೇಲೆ ಇಡಿ...








