ಶಾಸಕರ ಅಭಿಪ್ರಾಯದ ಮೇರೆಗೆ ಮುಂದಿನ ಸಿಎಂ ಆಯ್ಕೆ : ಈಶ್ವರಪ್ಪ Ishwarappa
ಚಿತ್ರದುರ್ಗ : ಕೇಂದ್ರದ ನಾಯಕರು ರಾಜ್ಯದ ಎಲ್ಲಾ ಶಾಸಕರ ಅಭಿಪ್ರಾಯದ ಮೇರೆಗೆ ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದಲ್ಲಿ ಸಿಎಂ ಬದಲಾವಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ.
ಯಾಕೆ ಸುಖಾಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಸಿಎಂ ಹೇಳಿಕೆ ಮೆಚ್ಚಿಕೊಂಡಿದ್ದಾರೆ ಎಂದರು.
ಇದೇ ವೇಳೆ ಪರೀಕ್ಷೆ ಬರೆದು ಪಾಸಾಗಿದ್ದೇವೆಂದ ಯೊಗೀಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಅದೆಲ್ಲ ಹಳೇ ಓಬಿರಾಯನ ಕಥೆಗಳು ಅಂತಾರಲ್ಲ ಹಾಗೇ.
ಯೊಗೀಶ್ವರ್, ಯತ್ನಾಳ್, ಬೆಲ್ಲದ್ ಹೀಗೆ ಅಂದರು ಅನ್ನೋದೆಲ್ಲ ಮುಗಿದು ಹೋಗಿದೆ. ರಾಷ್ಟ್ರೀಯ ನಾಯಕರು, ಬಿಎಸ್ ವೈ ಮಾತು ಅಷ್ಟೇ ಉಳಿದಿರುವುದು. ಯಾರ ಮಾತಿಗೂ ಬೆಲೆ ಇಲ್ಲ ಎಂದು ಗರಂ ಆದರು.









