ದೇಶದಲ್ಲಿ ಇಳಿಮುಖವಾದ ಕೊರೊನಾ ಸೋಂಕಿತರ ಸಂಖ್ಯೆ Saaksha Tv
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 58,077 ಹೊಸ ಪ್ರಕರಣಗಳು ಮತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೊರೊನಾ ಏರಿಕೆ ಪ್ರಮಾಣವು ದಿನಕ್ಕೆ ಶೇ 3.89 ರಷ್ಟಿದ್ದು, ಇನ್ನೂ ಸಕ್ರಿಯ ಪ್ರಕರಣಗಳು 6,97,802 ಇದ್ದು, ಇದು ಶೇ 1.64 ಪ್ರಮಾಣದಷ್ಟಿದೆ. ಇನ್ನೂ 1,50,407 ಲಕ್ಷ ಜನರು ಚೇತರಿಸಿಕೊಂಡಿದ್ದು, ಚೇತರಿಕೆ ಪ್ರಮಾಣವು 96.95 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೆ 657 ಜನರು ಸಾವನ್ನಪ್ಪಿದ್ದಾರೆ. ಹಾಗೇ ಇಲ್ಲಿವರೆಗೆ 171.79 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.