ಭಾರತದಲ್ಲಿ 3,000 ದಾಟಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ…
ಭಾರತದಲ್ಲಿ ಕೋವಿಡ್-19 ರ ಓಮಿಕ್ರಾನ್ (B.1.1.529) ರೂಪಾಂತರದ ಸೋಂಕಿಗೆ ಒಳಗಾದವರ ಸಂಖ್ಯೆ ಶುಕ್ರವಾರ 3,000 ಪ್ರಕರಣಗಳನ್ನ ದಾಟಿದೆ. ಒಟ್ಟು 3,007 ಪ್ರಕರಣಗಳು ವೇಗವಾಗಿ ಹರಡುವ ಒಮಿಕ್ರಾನ್ ಸ್ಟ್ರೈನ್‌ನೊಂದಿಗೆ ಪತ್ತೆಯಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಇದು ಜನವರಿ 6 ರಂದು 2,630 ಸೋಂಕು ಪತ್ತೆಯಾಗಿತ್ತು. ಇಂದು 377 ಪ್ರಕರಣಗಳು ಹೆಚ್ಚಳವಾಗಿದೆ. ಹೊಸ ರೂಪಾಂತರವು ಈಗ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿದೆ. 1,199 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳಿವೆ.
ರಾಜ್ಯಗಳ ಪೈಕಿ, ಮಹಾರಾಷ್ಟ್ರವು ಇಲ್ಲಿಯವರೆಗೆ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳನ್ನು ದಾಖಲಿಸಿದೆ, 876 ಅದರಲ್ಲಿ ಜನವರಿ 6 ರ ಗುರುವಾರ 79 ಪ್ರಕರಣ ಮಾತ್ರ ವರದಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ 381 ಜನರು ಚೇತರಿಸಿಕೊಂಡಿದ್ದಾರೆ.
ದೆಹಲಿಯು 465 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.








