ರಾಮನಗರ: ಫ್ಯಾಕ್ಟರಿ ಮಾಲೀಕನೊಬ್ಬ ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಜೀತಕ್ಕೆ ಇಟ್ಟುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಮೆಹಬೂಬ್ ನಗರದ ಸಿಲ್ಕ್ ಫ್ಯಾಕ್ಟರಿ ಮಾಲೀಕ, ಕಾರ್ಮಿಕ ಮುಂಗಡವಾಗಿ ಹಣ ಪಡೆದಿದ್ದಕ್ಕೆ ಆತನ ಕಾಲಿಗೆ ಸರಪಳಿ ಕಟ್ಟಿ ಜೀತಕ್ಕೆ ನೇಮಿಸಿಕೊಂಡಿರುವ ಅಮಾನವೀಯ ಘಟನೆ ನಡೆದಿದೆ. ಕಾರ್ಮಿಕ ವಸೀಂ (24) ಜೀತಕ್ಕೆ ಇದ್ದ ವ್ಯಕ್ತಿ ಎನ್ನಲಾಗಿದೆ.
ಈ ವ್ಯಕ್ತಿ ಮಾಲೀಕನ ಬಳಿ 1.50 ಲಕ್ಷ ರೂ. ಮುಂಗಡವಾಗಿ ಸಾಲ ಪಡೆದಿದ್ದ. ಆದರೆ, ನಂತರ ಒಂದು ತಿಂಗಳುಗಳ ಕಾಲ ಅನಿವಾರ್ಯವಾಗಿ ಕೆಲಸಕ್ಕೆ ಹೋಗಲು ಆಗಿರಲಿಲ್ಲ. ಹೀಗಾಗಿ ಮಾಲೀಕ ಜೀತಕ್ಕೆ ನೇಮಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕಾರ್ಮಿಕನ ಕಾಲಿಗೆ 9 ದಿನಗಳಿಂದ ಸರಪಳಿ ಹಾಕಿದ್ದು, ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ರಾಮನಗರ ಟೌನ್ ಪೊಲೀಸರು (Police) ಸ್ಥಳಕ್ಕೆ ತೆರಳಿ ಆತನನ್ನು ರಕ್ಷಿಸಿದ್ದಾರೆ.