ರಾಜಕೀಯ ಪಕ್ಷಕ್ಕೆ ಹಿಂದುಸ್ಥಾನಿ ಹೆಸರನ್ನ ಜನರೇ ನಿರ್ಧರಿಸುತ್ತಾರೆ – ಗುಲಾಂ ನಬಿ ಆಜಾದ್
ಕಾಂಗ್ರೆಸ್ ನೊಂದಿಗೆ 50 ವರ್ಷಗಳ ಸಂಬಂಧವನ್ನ ಕಡಿದುಕೊ0ಡಿರುವ ಗುಲಾಂ ನಬಿ ಆಜಾದ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಿಸುವುದಾಗಿ ತಿಳಿಸಿದ್ದಾರೆ. ಜಮ್ಮುವಿನಲ್ಲಿ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಹೊಸ ಪಕ್ಷದ ಹೆಸರು ಮತ್ತು ಧ್ವಜವನ್ನು ಜನರೇ ನಿರ್ಧರಿಸುತ್ತಾರೆ ಎಂದು ಸಮಾವೇಶದಲ್ಲಿ ತಿಳಿಸಿದ್ದಾರೆ.
ಜಮ್ಮುವಿನ ಸೈನಿಕ್ ಮೈದಾನದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಆಜಾದ್, ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ನಾವಿದ್ದೇವೆ ಎಂದು ಭರವಸೆಯ ನುಡಿಗಳನ್ನಾಡಿದ್ದಾರೆ.
ನಾನು ನನ್ನ ಪಕ್ಷಕ್ಕೆ ಹೆಸರನ್ನು ನಿರ್ಧರಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ಪಕ್ಷದ ಹೆಸರು ಮತ್ತು ಧ್ವಜವನ್ನು ನಿರ್ಧರಿಸುತ್ತಾರೆ. ನಾನು ನನ್ನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರನ್ನು ನೀಡುತ್ತೇನೆ. ಅದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.