ರಾಮನಗರ: ವ್ಯಕ್ತಿಯೊಬ್ಬ ಸ್ನೇಹಿತರೊಂದಿಗೆ ಚಾರಣಕ್ಕೆ ತೆರಳಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ (Uttar Pradesh) ಮೂಲದ ಯುವಕ ನಾಪತ್ತೆಯಾಗಿದ್ದು, ಮಾಗಡಿ ತಾಲೂಕಿನ ಸಾವನದುರ್ಗದಲ್ಲಿ (Savandurga) ಘಟನೆ ನಡೆದಿದೆ. ರಜೆ ಇದ್ದ ಹಿನ್ನೆಲೆಯಲ್ಲಿ ಗಗನ್ ದೀಪ್ ಸಿಂಗ್ (30) ಚಾರಣಕ್ಕೆ ತೆರಳಿದ್ದ. ಈ ಸಂದರ್ಭದಲ್ಲಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಹೀಗಾಗಿ ಗಗನ್ ಸ್ನೇಹಿತ ಬೆಟ್ಟದಿಂದ ಕೆಳಗೆ ಬಂದು ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗೆ ದೂರು ಸಲ್ಲಿಸಿದ್ದಾರೆ. ಮೊಬೈಲ್ ಸ್ವಿಚ್ಆಫ್ ಆಗಿದೆ. ಭಾನುವಾರ ಮಧ್ಯಾಹ್ನದಿಂದಲೂ ನಾಪತ್ತೆ ಆಗಿರುವ ಗಗನ್ಗಾಗಿ ಹುಡುಕಾಟ ನಡೆದಿದ್ದು, ಸುಳಿವು ಸಿಕ್ಕಿಲ್ಲ. ಡ್ರೋನ್ ಬಳಕೆ ಮಾಡಿ ಅವರಿಗಾಗಿ ಹುಡುಕಾಟ ನಡೆಸಲಾಗಿದ್ದು, ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ.