ಹಾಂಗ್ ಕಾಂಗ್: ವಿಮಾನ ನಿಲ್ದಾಣದಲ್ಲಿ (Hong Kong) ವಿಮಾನ ಡಿಕ್ಕಿ ಹೊಡೆದು ಸಿಬ್ಬಂದಿ ಸಾವನ್ನಪ್ಪಿರುವ ಅಪರೂಪದ ಘಟನೆಯೊಂದು ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿಯ ಹೆಸರು ಗೊತ್ತಾಗಿಲ್ಲ. ಆದರೆ, ಈ ಸಿಬ್ಬಂದಿ ಜೋರ್ಡಾನ್ ಪ್ರಜೆ. ಹಾಂಗ್ ಕಾಂಗ್ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇವರು ಟ್ರಕ್ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಕೆಳಗೆ ಬಿದ್ದಿದ್ದಾರೆ. ಆಗ ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಟ್ರಕ್ ಚಾಲನೆ ಮಾಡುವಾಗ ಈತ ಸೀಟ್ ಬೆಲ್ಟ್ ಹಾಕಿರಲಿಲ್ಲ ಎನ್ನಲಾಗಿದೆ. ವಿಮಾನ ಹಿಂದಕ್ಕೆ ಚಲಿಸುವಂತೆ ಮಾಡಲು ಟವ್ ಟ್ರಕ್ನ್ನು ಬಳಸುತ್ತಾರೆ. ಈ ಟ್ರಕ್ ಮೂಲಕ ವಿಮಾನ ಹಿಂದಕ್ಕೆ ಚಲಾಯಿಸುವಂತೆ ಮಾಡುವ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಈ ಅವಘಡ ಸಂಭವಿಸಿದೆ.







