ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸ್

1 min read
Police Saaksha Tv

ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸ್ Saaksha Tv

ಮಂಗಳೂರು: ಮೊಬೈಲ್ ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಬೆನ್ನಟ್ಟಿ ನೆಲಕ್ಕೆ ಕೆಡವಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡಿ ಸ್ಥಳಿಯರು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಸಖತ್ ವೈರಲ್ ಆಗಿದೆ.

ಈ ಘಟನೆಯು ಜ 12 ರಂದು ನಡೆದಿದೆ. ಇಬ್ಬರು ವ್ಯಕ್ತಿಗಳು ಅರಚುತ್ತಾ ಓಡುತ್ತಾ ಇದ್ದರು. ಹಾಗೂ ವಾಹನ ಸಂಚಾರಕ್ಕೂ ಅಡ್ಡಿ ಪಡಿಸುತ್ತಾ ಇದ್ದರು. ಇದನ್ನು ಕಂಡ ಪೊಲೀಸ್ ಕಮಿಷನರ್ ಕಛೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಬೆನ್ನಟ್ಟಿ ವಿಚಾರಿಸಿದಾಗ ಸತ್ಯ ಹೊರಗಡೆ ಬಂದಿದೆ.

ಆರೋಪಿಯು ಬಿಹಾರಿ ಮೂಲನವನಾಗಿದ್ದು, ಇವನ ಗುಂಪಿನ ಮೂವರು ಸೇರಿ ಈ ಕೃತ್ಯ ಎಸಗಿದ್ದಾರೆ. ಮೂವರಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು ಒಬ್ಬನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd