ಪೋಸ್ಟ್ ಆಫೀಸ್ ಇನ್ನು ಮುಂದೆ ಸಾಮಾನ್ಯ ಸೇವಾ ಕೇಂದ್ರ
ಹೊಸದಿಲ್ಲಿ, ಸೆಪ್ಟೆಂಬರ್08: ಪೋಸ್ಟ್ ಆಫೀಸ್ ಗ್ರಾಹಕರಿಗೆ ಒಳ್ಳೆಯ ಸುದ್ದಿ. ವಿದ್ಯುತ್, ನೀರು ಮತ್ತು ಅನಿಲದಂತಹ ಹೆಚ್ಚಿನ ಬಿಲ್‌ಗಳನ್ನು ಇನ್ನು ಮುಂದೆ ಹತ್ತಿರದ ಅಂಚೆ ಕಚೇರಿಯಲ್ಲಿ ಪಾವತಿಸಬಹುದು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂಚೆ ಕಚೇರಿಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಾಗಿ ಪರಿವರ್ತನೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂಚೆ ಕಚೇರಿಗಳಲ್ಲಿ 73 ಅಗತ್ಯ ಸೇವೆಗಳನ್ನು ಕೇಂದ್ರ ಸರ್ಕಾರದ ನಿರ್ದೇಶನದಂತೆ ಒಂದೇ ಸೂರಿನಡಿ ಒದಗಿಸುವ ಸಾಮಾನ್ಯ ಸೇವಾ ಕೇಂದ್ರಗಳು ಪ್ರಾರಂಭವಾಗಲಿವೆ. ಮೊದಲ ಹಂತದಲ್ಲಿ ಉತ್ತರ ಪ್ರದೇಶದ ಪ್ರತಾಪುರದಲ್ಲಿನ ಪ್ರಧಾನ ಪೋಸ್ಟ್ ಆಫೀಸ್ ಈ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಬಳಿಕ ದೇಶದ ಇತರ ಎಲ್ಲಾ ಅಂಚೆ ಕಚೇರಿಗಳು ಶೀಘ್ರದಲ್ಲೇ ಇದನ್ನು ಪ್ರಾರಂಭಿಸಲಿವೆ.
ಪಾಸ್‌ಪೋರ್ಟ್ ತಯಾರಿಕೆ, ಪಿಎಂ ಯೋಜನೆಗಳು, ವೃದ್ಧಾಪ್ಯ ಪಿಂಚಣಿ, ವಿಧವೆ ಪಿಂಚಣಿ ಮತ್ತು ವಿಮಾ ಕಂತುಗಳು ಮುಂತಾದ ಅನೇಕ ಸೇವೆಗಳು ಶೀಘ್ರದಲ್ಲೇ ಅಂಚೆ ಕಚೇರಿಗಳಲ್ಲಿ ಲಭ್ಯವಾಗಲಿವೆ. ಜನರು ಈವರೆಗೆ ಅಂಚೆ ಕಚೇರಿಗಳಲ್ಲಿ ಅಂಚೆ ಕೆಲಸಗಳನ್ನು, ಅಂಚೆ ಖಾತೆ ಅಥವಾ ಅಧಾರ್ ಕಾರ್ಡ್‌ಗಳಿಗಾಗಿ ಸಂಪರ್ಕಿಸುತ್ತಿದ್ದರು. ಶೀಘ್ರದಲ್ಲೇ ಜನನ ಅಥವಾ ಮರಣ ಪ್ರಮಾಣಪತ್ರ, ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್, ಪ್ರಧಾನಿ ವಸತಿ ಯೋಜನೆ, ಪಿಎಂ ಬೆಳೆ ವಿಮಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ, ವಿದ್ಯುತ್ ಬಿಲ್‌ಗಳು, ನೀರಿನ ಬಿಲ್‌ಗಳು, ಗ್ಯಾಸ್ ಬಿಲ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಲು ಸೌಲಭ್ಯಗಳು ಸಾಮಾನ್ಯ ಜನರಿಗೆ ಮುಕ್ತವಾಗಲಿವೆ