ಚಾಮುಂಡಿ ಬೆಟ್ಟಕ್ಕೆ ಬೇಟಿ ಕೊಟ್ಟ ‘ರೈಡರ್’ ಹೀರೋ ನಿಖಿಲ್.
ಜೆ ಡಿ ಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬೇಟಿ ದೇವಿಯ ಆಶಿರ್ವಾದವನ್ನ ಪಡೆದರರು.
ನಿಖಿಲ್ ಅಭಿನಯದ ಚಿತ್ರ ರೈಡರ್ ಬಿಡುಗಡೆ ಸಿದ್ಧವಾಗಿದ್ದು ತಾಯಿಯ ಆಶಿರ್ವಾದ ಪಡೆಯುವ ಸಲುವಾಗಿ ಬಂದಿದ್ದೇವೆ ಎಂದು ತಿಳಿಸಿದರು.. ಚಿತ್ರದ ನಿರ್ಮಾಪಕ ಸುನಿಲ್ ಗೌಡ ಸಹ ಭಾಗಿಯಾಗಿದ್ದರು.
ನಿಖಿಲ್ ಕುಮಾರಸ್ವಾಮಿ ಗೆ ಜಿ ಟಿ ದೇವೇಗೌಡ ಅವರ ಮಗ ಜಿ ಟಿ ಹರೀಶ್ ಗೌಡ ಸೇರಿದಂತೆ ಶಿವು ಪುಟ್ಟರಾಜು, ಪ್ರಸನ್ನ ಪಿರಿಯಾಪಟ್ಟಣ,ಶೋಭಿತ್ ರಂಗಪ್ಪ ಸಾಥ್ ನೀಡಿದರು. ರಾಜಕೀಯ ಹೊರತಾಗಿಯು ನಿಖಿಲ್ ಮತ್ತು ಹರೀಶ್ ಒಳ್ಳೆಯ ಸ್ನೇಹಿತರಾಗಿದ್ದಾರೆ.
ನಿಖಿಲ್ ಅಭಿನಯದ ರೈಡರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಕೆಲವೇ ದಿನಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಚಿತ್ರದ ಮೊದಲ ಹಾಡು ಡವ್ವ ಡವ್ವ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು 4 ಲಕ್ಷಕ್ಕೂ ಹೆಚ್ಚು ಬಾರಿ ವಿಕ್ಷಣೆಯಾಗಿದೆ. ಅರ್ಜುನ್ಯ ಜನ್ಯ ಸಂಗೀತಕ್ಕೆ ಅರ್ಮಾನ್ ಮಲ್ಲಿಕ್ ದ್ವನಿಯಾಗಿದ್ದಾರೆ. ವಿಜಯಕುಮಾರ್ ಕೊಂಡ ನಿರ್ದೇಶನ ಮಾಡುತ್ತಿದ್ದು ಕಶ್ಮೀರಾ ಪರ್ದೇಶಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ರಾಯನ್ ರಾಜ್ ಗೆ ಹುಟ್ಟುಹಬ್ಬದ ಸಂಭ್ರಮ
ಮಿಲಿಯನ್ ಗಟ್ಟಲೆ ವೀವ್ಸ್ ಪಡೆದ ಭಜರಂಗಿ 2 – ಇದು ದೈವ ದೆವ್ವಗಳ ನಡುವಿನ ಹೋರಾಟ..!