ಮಿಲಿಯನ್ ಗಟ್ಟಲೆ ವೀವ್ಸ್ ಪಡೆದ ಭಜರಂಗಿ 2 – ಇದು ದೈವ ದೆವ್ವಗಳ ನಡುವಿನ ಹೋರಾಟ..!
ಭಜರಂಗಿ 2 ಟ್ರೇಲರ್ ನೋಡ್ತಿದ್ರೆ 3 ನಿಮಿಷಗಳ ಕಾಲ ನಾವು ಬೇರೆಯದ್ದೇ ಲೋಕದಲ್ಲಿದ್ದೇವೇನೋ ಅನ್ನೋ ಫೀಲ್ ಬರುತ್ತೆ. ವ್ಹಾವ್ ಸಖತ್ ಲೊಕೇಶನ್ , ಸ್ಕ್ರೀನ್ ಪ್ಲೇ , ಅದ್ಭುತ ಮ್ಯೂಸಿಕ್ , ಥ್ರಿಲ್ಲಿಂಗ್ ಸೀನ್ಸ್ , ಶಿವಣ್ಣನ ಎಂಟ್ರಿ ರೋಮಾಂಚನ ಮೂಡಿಸಿದ್ರೆ, ಲೋಕಿ ಸೀನ್ಸ್ ಹೊಸ ಕುತೂಹಲ ಹುಟ್ಟಹಾಕುತ್ತದೆ. ಭಜರಂಗಿ 1 , ವಜ್ರಕಾಯ ಸೂಪರ್ ಹಿಟ್ ಆದ ನಂತರ ಶಿವಣ್ಣ ಹಾಗೂ ಎ. ಹರ್ಷ ಕಾಂಬಿನೇಷನ್ ನಲ್ಲಿಯೇ ಮೂಡಿಬರುತ್ತಿರೋ ಭಜರಂಗಿ 2 ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಭಜರಂಗಿ 2 ಟ್ರೇಲರ್ ಅನ್ನು ಸಿನಿಮಾ ತಂಡ ರಿಲೀಸ್ ಮಾಡಿದ್ದು, ಯಾರೂ ಕೂಡ ನಿರೀಕ್ಷೆಯೇ ಮಾಡದ ರೀತಿಯಲ್ಲಿ , ಅತ್ಯದ್ಭುತವಾಗಿದೆ ಟ್ರೇಲರ್. ಸಿನಿಮಾ ರಿಲೀಸ್ ಗಾಗಿ ತುದಿಗಾಲಲ್ಲಿ ಕಾಯ್ತಿರುವ ಶಿವಣ್ಣ ಅಭಿಮಾನಿಗಳ ಕಾತರತೆಯನ್ನ 10 ಪಟ್ಟು ಹೆಚ್ಚಾಗಿಸಿದೆ ಟ್ರೇಲರ್. ಈ ಸಿನಿಮಾದಲ್ಲಿ ದೈವ ದೆವ್ವಗಳ ನಡುವಿನ ಕಾದಾಟ ನೋಡೋದಕ್ಕೆ ಸಿಗಲಿದೆ. ಸೂಪರ್ ನ್ಯಾಚುರಲ್ ಎಲಿಮೆಂಟ್ಸ್ ಸಿನಿಮಾದ ಥ್ರಿಲ್ ಮತ್ತಷ್ಟು ಹೆಚ್ಚಿಸಿದೆ.
ಕಂದಮ್ಮನ ಶಸ್ತ್ರ ಚಿಕಿತ್ಸೆಗೆ ನೆರವಾದ ರಿಯಲ್ ಹೀರೋ ಸೋನು ಸೂದ್..!
ಕೇವಲ ರಿಲೀಸ್ ಆದ ಒಂದೇ ದಿನದಲ್ಲೇ ವೀವ್ಸ್ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಇನ್ನೂ ಕೂಡ ಟ್ರೇಲರ್ ಯೂಟ್ಯೂಬ್ ನಲ್ಲಿ ಟ್ರೆಮಡಿಂಗ್ ಆಗ್ತಿದ್ದು, ಕೋಟ್ಯಾನಂತರ ಜನರು ಟ್ರೇಲರ್ ನೋಡಿ ಭಜರಂಗಿಗೆ ಉಘೇ ಉಘೇ ಎನ್ನುತ್ತಿದ್ದಾರೆ. ಭಾವನಾ ಮೆನನ್, ಖಳನಾಯಕ ಆರಕ ಪಾತ್ರ , ಲೋಕಿ ಡೇರಿಂಗ್ ಸೀನ್ , ಶೃತಿ ಪಾತ್ರ ಕುತೂಹಲ ಹೆಚ್ಚಿಸುತ್ತಿದ್ರೆ, ಮ್ಯೂಸಿಕ್ ಎದೆಬಡಿತವನ್ನ ಮತ್ತಷ್ಟು ಹೆಚ್ಚು ಮಾಡ್ತಿದೆ. ಶಿವಣ್ಣನ ಫೈಟ್ ಸೀನ್ಸ್ , ಅವರ ಗೆಟ್ ಅಪ್ ಗೆ ಫ್ಯಾನ್ಸ್ ವ್ಹಾ.. ವ್ಹಾ.. ಎನ್ನುತ್ತಿದ್ದಾರೆ.
ಒಟ್ಟಾರೆ ಸಿನಿಮಾ ರಿಲೀಸ್ ಆಗೋದಕ್ಕೆ ಜನ ಜಾತಕ ಪಕ್ಷಿಗಳಂತೆ ಕಾಯ್ತಾಯಿರೋ ಹೊತ್ತಲ್ಲೇ ಟ್ರೇಲರ್ ಕಾತರತೆಯನ್ನ ಮತ್ತಷ್ಟು ಹೆಚ್ಚಿಸಿದೆ. ಸಿನಿಮಾ ಟ್ರೇಲರ್ ನೋಡಿ ಪರಭಾಷಿಗರು ಸಹ ಶಿವಣ್ಣನ ಖದರ್ ಗೆ ಫಿದಾ ಆಗಿದ್ದಾರೆ. ಈ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿದಿದ್ದದರೆ ನಿಜಕ್ಕೂ ಸಿನಿಮಾ ಬಾರತೀಯ ಸಿನಿಮಾಗಳ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ಸೇರೋದ್ರಲ್ಲಿ ಡೌಟೇ ಇರುತ್ತಿರಲಿಲ್ಲ ಅಂತ ಅನೇಕ ನೆಟಿಜನ್ಸ್ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ನಟನ ಗುಂಡೇಟಿಗೆ ಬಲಿಯಾದ ಛಾಯಾಗ್ರಾಹಕಿ
ಸಲಗಕ್ಕೆ ಎದುರಾದ ಸಂಕಷ್ಟ ದೂರ – ಸಲಗ ತುಳಿಯುವ ಪ್ರಯತ್ನ ಬಿಡಿ ಎಂದ ದುನಿಯಾ ವಿಜಯ್