ಸಲಗಕ್ಕೆ ಎದುರಾದ ಸಂಕಷ್ಟ ದೂರ – ಸಲಗ ತುಳಿಯುವ ಪ್ರಯತ್ನ ಬಿಡಿ ಎಂದ ದುನಿಯಾ ವಿಜಯ್
ಸಾಕಷ್ಟು ಅಡೆತಡೆಗಳ ನಡುವೆಯೂ ರಿಲೀಸ್ ಆಗಿರುವ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ ನಟಿಸಿರುವ ಸಲಗ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಭರ್ಜಜರಿಯಾಗಿ ಸಿನಿಮಾ ಓಡ್ತಿದೆ. ಆದ್ರೆ ಈ ನಡುವೆ ಸಿನಿಮಾಗೆ ಮತ್ತೊಂದು ಸಂಕಷ್ಟ ಎದುರಾಗಿತ್ತು. ಹೌದು ಅಕ್ಟೋಬರ್ 14 ರಂದು ರಿಲೀಸ್ ಆಗಿ ರಾಜ್ಯದ ವಿವಿಧ ಸಿನಿಮಾ ಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣ್ತಿದೆ ಸಲಗ ಸಿನಿಮಾ. ಒಳ್ಳೆ ಪ್ರದರ್ಶನ ಕಾಣ್ತಿರುವ ಚಿತ್ರಮಂದಿರಗಳ ಪೈಕಿ ತ್ರಿವೇಣಿ ಚಿತ್ರಮಂದಿರೂ ಒಂದು. ಆದ್ರೆ ಈ ಚಿತ್ರಮಂದಿರದಲ್ಲಿ (ಅಕ್ಟೋಬರ್ 22)ಕ್ಕೆ ‘ರಿಯಲ್ ಎಸ್ಟೇಟ್’ ಎಂಬ ಹೊಸಬರ ಸಿನಿಮಾ ರಿಲೀಸ್ ಆಗಬೇಕಿತ್ತು.
ಈ ಸಿನಿಮಾಮಂದಿರವನ್ನ ರಿಯಲ್ ಎಸ್ಟೇಟ್ ಚಿತ್ರತಂಡ ಮುಖ್ಯ ಥಿಯೇಟರ್ ಆಗಿ ಬುಕ್ ಮಾಡಿಕೊಂಡಿತ್ತು. ಆದ್ರೆ ಇದೇ ಥಿಯೇಟರ್ ನಲ್ಲಿ ಸಲಗ ಉತ್ತಮ ಪ್ರದರ್ಶನ ಕಾಣ್ತಿದ್ದು, ಸಿನಿಮಾ ಹಿಂದೆ ತೆಗೆಯಲು ದುನಿಯ್ ವಿಜಯ್ ಅವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ರಿಯಲ್ ಎಸ್ಟೇಟ್ ಸಿನಿಮಾದ ನಿರ್ಮಾಪಕರಾದ ರಾಮಕೃಷ್ಣ , ದುನಿಯಾ ವಿಜಯ್ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂಕ್ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಈ ಬಗ್ಗೆ ದುನಿಯಾ ವಿಜಯ್ ಹಾಗೂ ರಾಮಕೃಷ್ಣ ಪರಸ್ಪರ ಮಾತುಕತೆ ನಡೆಸಿಕೊಂಡಿದ್ದು, ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಜಯ್ ಅವರು ರಾಮಕೃಷ್ಣ ಅವರ ಮನವೊಲಿಸಿದ್ದು, ರಿಯಲ್ ಎಸ್ಟೇಟ್ ಸಿನಿಮಾವನ್ನು ಅನುಪಮ ಚಿತ್ರಮಂದಿರದಲ್ಲಿ ರಿಲೀಸ್ ಮಾಡುವಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ. ಇನ್ನೂ ಸಲಗ ತ್ರಿವೇಣಿ ಚಿತ್ರಮಂದಿರಲ್ಲಿ ಮುಂದುವರೆಯಲಿದೆ.
ಅಷ್ಟೇ ಅಲ್ಲದೇ ಈ ಬಗ್ಗೆ ಮಾಧ್ಯಮದವರ ಜೊತೆ ಮಾತಾನಡಿದ ದುನಿಯಾ ವಿಜಯ್ ಅವರು ಕೆಲವರು ಸಲಗ ಸಿನಿಮಾವನ್ನ ಹೇಗಾದ್ರೂ ತುಳಿಯಬೇಕೆಂದು ರಾಮಕೃಷ್ಣ ಅವರನ್ನ ಆಯುಧವಾಗಿ ಬಳಸಿಕೊಳ್ಳಲು ಯತ್ನಿಸಿದ್ರು. ಆದ್ರೆ ರಾಮಕೃಷ್ಣ ಅವರು ಹೋರಾಟಗಾರರು. ನಮ್ಮ ಎದುರು ನೇರವಾಗಿ ಮಾತನಾಡಿದ್ರು. ನಾವು ಪರಸ್ಪರ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ ಎಂದರು. ಅಲ್ಲದೇ ಸಲಗ ಸಿನಿಮಾವನ್ನು ತುಳಿಯುವ ಪ್ರಯತ್ನ ಕೈಬಿಡಿ. ಇಲ್ಲದೇ ಹೋದ್ರೆ ನೀವು ಸಣ್ಣವರಾಗುತ್ತೀರಿ. ಸಲಗ ಸಿನಿಮಾವನ್ನೂ ಏನೇ ಮಾಡಿದ್ರು ನಿಲ್ಲಿಸಲು ಆಗೋದಿಲ್ಲ. ಸಲಗ ಹೋಗಿದ್ದೇ ದಾರಿ ಎಂದಿದ್ದಾರೆ.