ಅವಹೇಳನ ಮಾಡಿದವರ ವಿರುದ್ಧ ಕೇಸ್ ದಾಖಲಿಸಿದ ಸಮಂತಾ..!
ಟಾಲಿವುಡ್ ನಾಗಚೈತನ್ಯ ಹಾಗೂ ನಟಿ ಸಮಂತಾ 4 ವರ್ಷಗಳ ದಾಂಪತ್ಯ ಮುರಿದುಕೊಂಡು ಡಿವೋರ್ಸ್ ಪಡೆದ ಬಳಿಕ ನೆಟ್ಟಿಗರು ಇಬ್ಬರನ್ನೂ ಸಖತ್ ಟ್ರೋಲ್ ಮಾಡ್ತಾಯಿದ್ದಾರೆ. ನಾಗಚೈತನ್ಯ ಅಭಿಮಾನಿಗಳು ಸಮಂತಾ ಮೇಲೆ ಮುಗಿಬಿದ್ರೆ ಸಮಂತಾ ಅಭಿಮಾನಿಗಳು ನಾಗಗ ಚೈತನ್ಯ ವಿರುದ್ಧ ಆರೋಪಗಳನ್ನ ಮಾಡ್ತಾಯಿದ್ದಾರೆ.
ಈ ನಡುವೆ ಸಮಂತಾ ಅವರ ಬಗ್ಗೆ ಅನೇಕ ವದಂತಿಗಳು ಹರಿದಾಡಿವೆ. ವೈಯಕ್ತಿಕವಾಗಿ ಸಮಂತಾ ಅವರನ್ನ ಅನೇಕರು ಅವಹೇಳನ ಮಾಡಿದ್ದಾರೆ. ಅಷ್ಟೇ ಅಲ್ಲ ನಟ ಸಿದ್ಧಾರ್ಥ ಸಹ ಸಮಂತಾ ವಿರುದ್ಧ ಕಿಡಿಕಾರಿದ್ದರು. ಸಮಂತಾ ಹಾಗೂ ಅವರ ಪರ್ಸನಲ್ ಡಿಸೈನರ್ ಪ್ರೀತಂ ಜುಗಲ್ಕರ್ ನಡುವೆ ಸಂಬಂಧ ಇದೆ ಎಂಬ ರೂಮರ್ ಗಳು ಕೂಡ ಹರಿದಾಡಿದ್ವು. ಟಿವಿ ಯೂಟ್ಯೂಬ್ ಚಾನಲ್ ಗಳಲ್ಲೂ ಕೂಡ ಅನೇಕ ಸುದ್ದಿಗಳನ್ನ ಬಿತ್ತರಿಸಲಾಗಿತ್ತು. ಆದ್ರೆ ಇಷ್ಟು ದಿನ ತಾಳ್ಮೆಯಾಗಿದ್ದ ಸಮಂತಾ ಈಗ ಸಿಡಿದೆದ್ದಿದ್ದಾರೆ.
ಹೌದು.. ಸಮಂತಾ ವಿರುದ್ಧ ಸುಳ್ಳು ಸುದ್ದಿ ಹರಡಿದ್ದ ಕೆಲ ಚಾನೆಲ್ ಗಳು , ಯೂಟ್ಯೂಬ್ ಚಾನಲ್ ಗಳು ಹಾಗೂ ವಕೀಲ ವೆಂಕಟ್ ರಾವ್ ಎಂಬುವವರ ವಿರುದ್ಧ ಸ್ಯಾಮ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.