ಆಸ್ಕರ್ ರೇಸ್ ನಲ್ಲಿ ಭಾರತದ 14 ಸಿನಿಮಾಗಳು – ಲಿಸ್ಟ್ ನಲ್ಲಿಲ್ಲ ಕನ್ನಡದ ಸಿನಿಮಾ..!
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲಿ ಭಾರತದ 14 ಸಿನಿಮಾಗಳು ಪೈಪೋಟಿಗೆ ಬಿದ್ದಿವೆ. ಹೌದು 95ನೇ ಆಸ್ಕರ್ ಪ್ರಶಸ್ತಿ ರೇಸ್ ಗೆ ಭಾರತದಿಂದ ಹೋಗುವ ಅಧಿಕೃತ ಸಿನಿಮಾಗಾಗಿ ಹುಡುಕಾಟ ಆರಂಭವಾಗಿದೆ. ಆಸ್ಕರ್ ಪ್ರಶಸ್ತಿ ಫೈಟ್ ನಲ್ಲಿ 14 ಸಿನಿಮಾಗಳು ಪರಸ್ಪರ ಪೈಪೋಟಿಗೆ ಬಿದ್ದಿವೆ. ಆದ್ರೆ ಬೇಸರದ ವಿಚಾರ ಅಂದ್ರೆ ಈ ರೇಸ್ ನಲ್ಲಿ ಯಾವುದೇ ಕನ್ನಡದ ಸಿನಿಮಾ ಇಲ್ಲ.
ಮಳಯಾಳಂನ ನಾಯಟ್ಟು , ತಮಿಳಿನ ಮಂಡೇಲಾ, ಹಿಂದಿಯ ಶೇರ್ನಿ , ಸರ್ದಾರ್ ಉದ್ಧಮ್ ಸಿಂಗ್ , ಬ್ರಿಡ್ಜ್ , ಗುಜರಾತಿ ಸಿನಿಮಾ ಚೆಲ್ಲ ಶೋ ಸೇರಿದಂತೆ ಇನ್ನೂ ಸಾಕಷ್ಟು ಸಿನಿಮಾಗಳು ರೇಸ್ ನಲ್ಲಿದ್ದು, ಆಯ್ಕೆ ಆಗಿರುವ 14 ಸಿನಿಮಾಗಳನ್ನು 15 ಮಂದಿಯ ಸಿನಿಮಾ ಕರ್ಮಿಗಳ ಪ್ಯಾನೆಲ್ ವೀಕ್ಷಿಸಿ ಒಂದು ಸಿನಿಮಾವನ್ನು ಆಯ್ಕೆ ಮಾಡಿ 95ನೇ ಆಸ್ಕರ್ ಗೆ ಭಾರತದ ಅಧಿಕೃತ ಆಯ್ಕೆಯಾಗಿ ಕಳುಹಿಸಲಿದೆ. ಅಂದ್ಹಾಗೆ ಕಳೆದ ವರ್ಷ ಅಂದ್ರೆ 94ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಮಲಯಾಳಂನ ಜಲ್ಲಿಕಟ್ಟು ಸಿನಿಮಾ ಅಧಿಕೃತ ಸಿನಿಮಾವಾಗಿ ಆಯ್ಕೆಯಾಗಿತ್ತು. ಆದರೆ ಅಂತಿಮ ನಾಲ್ಕರ ಘಟ್ಟಕ್ಕೆ ಆಯ್ಕೆಯಾಗಲು ವಿಫಲವಾಗಿತ್ತು.