ಕಳೆದುಹೋದ ಬಾಲಕಿಯ ಮಾಹಿತಿ ಕೊಟ್ಟವರಿಗೆ 4.5 ಕೋಟಿ ಬಹುಮಾನ
ಆಸ್ಟ್ರೇಲಿಯಾ ( ಸಿಡ್ನಿ ) – ಬ್ಲೋಹೋಲ್ಸ್ ಕ್ಯಾಂಪ್‌ಸೈಟ್ ಎಂಬ ಪ್ರದೇಶದಿಂದ ಕಾಣೆಯಾದ ಬಾಲಕಿಯನ್ನ ಹುಡುಕಿಕೊಟ್ಟವರಿಗೆ ಆಸ್ಟ್ರೇಲಿಯಾದ ಅಧಿಕಾರಿಗಳು ಬರೋಬ್ಬರಿ 4.5 ಕೋಟಿ ಬಹುಮಾನವನ್ನ ಘೋಷಿಸಿದ್ದಾರೆ. ಸತತ ಆರು ದಿನಗಳ ಕಾಲ ಸುತ್ತಮುತ್ತಲಿನ ಸ್ಥಳಗಳನ್ನ ಹುಡುಕಾಡಿರುವ ಪೊಲೀಸರು ಮಗುವಿನ ಸುಳಿವು ದೊರಕದಿರುವ ಕಾರಣ ಸಾರ್ವಜನಿಕರ ಸಹಾಯವನ್ನ ಕೇಳುತ್ತಿದ್ದಾರೆ…
ಕ್ಲಿಯೋ ಸ್ಮಿತ್ ಎನ್ನುವ ಬಾಲಕಿಯ ಕುಟುಂಬ ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ಭಾಗಕ್ಕೆ ಪ್ರವಾಸಕ್ಕೆಂದು ಬಂದಿತ್ತು…ಕ್ಯಾಂಪಸ್ ನ ಟೆಂಟ್ ನಲ್ಲಿ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಬಾಲಕಿ ತಪ್ಪಿಸಿಕೊಂಡಿದ್ದಾಳೆ ಎಂದು ಪೊಷಕರು ಅಳಲು ತೋಡಿಕೊಂಡಿದ್ದಾರೆ. ಈ ವಿಷಯ ಈಗ ಆಸ್ಟ್ರೇಲಿಯಾ ರಾಷ್ಟ್ರಾ ಮಟ್ಟದಲ್ಲಿ ಗಮನವನ್ನ ಸೆಳೆಯುತ್ತಿದೆ. ಆದಷ್ಟು ಬೇಗ ಬಾಲಕಿ ಪೋಷಕರ ಮಡಿಲು ಸೇರಲೆಂದು ಜನತೆ ಆಶಿಸುತ್ತಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾದ ಪೊಲೀಸ್ ಕಮಿಷನರ್ ಮಾತನಾಡಿ “ ನಾವು ಬಾಲಕಿಯನ್ನ ಹುಡುಕಲು ಎಲ್ಲ ರೀತಿಯಿಂದಲೂ ಪ್ರಯತ್ನವನ್ನ ಪಡುತ್ತಿದ್ದೇವೆ ನಾವು ಆ ಬಾಲಕಿಯನ್ನ ಜೀವಂತವಾಗಿ ಕರೆತರು ವಿಶ್ವಾಸವನ್ನ ಹೊಂದಿದ್ದೇವೆ. ನಮಗೆ ಸ್ಥಳಿಯ ನಾಗರೀಕರು ಸಹಾಯ ನೀಡಬೇಕು ’’ ಎಂದು ಕೇಳಿದ್ದಾರೆ..