ಹೋಮ್ ವರ್ಕ್ ಮಾಡಿಲ್ಲದಕ್ಕೆ ವಿಧ್ಯಾರ್ಥಿಯನ್ನ ಕೊಂದ ಶಿಕ್ಷಕ
ಹೋಮ್ ವರ್ಕ್ ಮಾಡಿಕೊಂಡು ಬಂದಿಲ್ಲ ಎನ್ನುವ ಕಾರಣಕ್ಕೆ ವಿಧ್ಯಾರ್ಥಿಯನ್ನ ಥಳಿಸಿ ಕೊಂದಿರುವ ಘಟನೆ ರಾಜಸ್ತಾನದಲ್ಲಿ ನಡೆದೆ. ಚುರು ಜಿಲ್ಲೆಯ ಸಲಸಾರ್ ಪ್ರದೇಶದ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದ್ದು ಸ್ಥಳಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಧ್ಯಾರ್ಥಿ ಗಣೇಶ್ ಎಂಬ 13 ವರ್ಷದ ಬಾಲಕನನ್ನ ಹೊಡೆದು ಕೊಂದಿರುವುದಾಗಿ ತಂದೆ ಆರೋಪಿಸಿದ್ದಾರೆ.
ರಾಜಸ್ತಾನದ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಸ್ತ್ರಾ ಅವರು ಘಟನೆಗೆ ವಿಶಾದ ವ್ಯಕ್ತ ಪಡಿಸಿದ್ಧ ಶಾಲೆಯನ್ನ ಅಮಾನತುಗೊಳಿಸಿ ತನಿಖೆತನ್ನ ನಡೆಸುವಂತೆ ಆದೇಶಿಸಿದ್ದಾರೆ. ಇಂದು ಬಾಲಕನ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರಲಿದ್ದು… ನಂತರ ಎಲ್ಲರ ಹೇಳಿಕೆಗಳನ್ನ ದಾಖಲಿಸಿ ನಂತರ ತನಿಖೆ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.