ಮತದಾರರ ಮನಸ್ಸನ್ನು ಭ್ರಷ್ಟಗೊಳಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೇ ಕಾಂಗ್ರೆಸ್ congress saaksha tv
ಬೆಂಗಳೂರು : ಮತದಾರರ ಮನಸ್ಸನ್ನು ಹಣದ ಮೂಲಕ ಭ್ರಷ್ಟಗೊಳಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೇ ಕಾಂಗ್ರೆಸ್ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
“ಬಿಜೆಪಿ ನೋಟು, ಕಾಂಗ್ರೆಸ್‍ಗೆ ವೋಟು’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ಟಾಂಗ್ ನೀಡಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ “ಬಿಜೆಪಿ ನೋಟು, ಕಾಂಗ್ರೆಸ್‍ಗೆ ವೋಟು’ ಎಂಬ ಘೋಷಣೆಯ ಮೂಲಕ ಡಿ.ಕೆ.ಶಿವಕುಮಾರ್ ಅವರು ಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ? ಈ ಹಿಂದೆ ನೀವು ಚಾಮರಾಜನಗರ, ಗುಂಡ್ಲುಪೇಟೆ ಉಪಚುನಾವಣೆಗಳನ್ನು ನೋಟು ಹಂಚಿಕೆ ಮಾಡಿ ಗೆದ್ದಿದ್ದೇ?
ಮತದಾರರ ಮನಸ್ಸನ್ನು ಹಣದ ಮೂಲಕ ಭ್ರಷ್ಟಗೊಳಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೇ ಕಾಂಗ್ರೆಸ್.
ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಅದು ಯಾಕೆ ಆಯ್ತು, ಇದು ಯಾಕೆ ಆಯ್ತು ಎಂದು ಬೊಬ್ಬೆ ಹೊಡೆದು ದೇಹಕ್ಕೆ ಆಯಾಸ ಮಾಡಿಕೊಳ್ಳಬೇಡಿ.ನೀವು ಸಂಪಾದನೆ ಮಾಡಿದ ಕಪ್ಪು ಹಣವೆಷ್ಟು? ನಿಮ್ಮ ಬಂಧನ ಹಾಗೂ ತಿಹಾರ್ ಜೈಲು ಯಾತ್ರೆಯ ಹಿನ್ನೆಲೆ ಏನು ಎಂದು ಪ್ರಶ್ನಿಸಿದೆ.