ಭಾರತೀಯ ವಾಯುಪಡೆಯ ತರಬೇತಿ ವಿಮಾನ ಅಪಘಾತ – ಪೈಲೆಟ್ ಪಾರು
ಭಾರತೀಯ ವಾಯುಪಡೆಯ ತರಬೇತಿ ನೀಡುವ ವಿಮಾನವು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಗುರುವಾರ ಪತನಗೊಂಡಿದೆ. ಅಪಘಾತದಲ್ಲಿ ಪೈಲಟ್ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐಎಎಫ್ ಮಿರಾಜ್ 2000 ವಿಮಾನವು ಇಂದು ಬೆಳಿಗ್ಗೆ ತರಬೇತಿ ನೀಡುವ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ಅಪಘಾತವಾಗಿದೆ…
An Indian Air Force trainer aircraft crashed in Bhind district of Madhya Pradesh. The pilot has been injured in the accident but is safe.
"An inquiry has been ordered to ascertain the cause of the accident," the IAF said in a statement.
Details here: https://t.co/xxyhzUM0XL pic.twitter.com/MnktNzqhEV
— Hindustan Times (@htTweets) October 21, 2021
ಪೈಲಟ್ ಸುರಕ್ಷಿತವಾಗಿ ಹೊರಹಾಕಲ್ಪಟ್ಟಿದ್ದು ಅಪಘಾತದ ಕಾರಣವನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆಎಂದು ಭಾರತೀಯ ವಾಯುಪಡೆ ತಿಳಿಸಿದೆ. ಮಂಕಾಬಾದ್ ಗ್ರಾಮದ ಹೊಲದಲ್ಲಿ ವಿಮಾನದ ಅವಶೇಷಗಳು ಬಿದ್ದಿವೆ.. ಹೊಲದಲ್ಲಿ ಬಿದ್ದಿರುವ ರಭಸಕ್ಕೆ ಟ್ರೈನರ್ ಜೆಟ್ ಅರ್ಧದಷ್ಟು ಹೂತುಹೋಗಿದೆ… ಸ್ಫೋಟದ ಶಬ್ದಕ್ಕೆ ಸ್ಥಳೀಯರು ಅಪಘಾತದ ಸ್ಥಳದ ಸುತ್ತ ಜಮಾಯಿಸಿದರು. ಭಿಂಡ್ ಪೊಲೀಸರು ಮತ್ತು ವಾಯುಪಡೆ ಅಧಿಕಾರಿಗಳು ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಿ ಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆ.