ಕಂದಮ್ಮನ ಶಸ್ತ್ರ ಚಿಕಿತ್ಸೆಗೆ ನೆರವಾದ ರಿಯಲ್ ಹೀರೋ ಸೋನು ಸೂದ್..!
ಮುಂಬೈ : ಸೋನು ಸೂದ್ ಅವರು ತಮ್ಮ ಮಾನವೀಯ ಗುಣಗಳು , ಸಹಾಯ ಮಾಡುವ ಗುಣದಿಂದಾಗಿಯೇ , ರಿಯಲ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಜನರು ರೀಲ್ ಜಗತ್ತಿನ ಪಶುಪತಿಯನ್ನ ರಿಯಲ್ ಲೈಫ್ ನ ದೇವರಂತೆ ಕಾಣ್ತಿದ್ದಾರೆ. ಈ ನಡುವೆ ಸೋನು ಸೂದ್ ಅವರು ಪುಟ್ಟ ಕಂದಮ್ಮನಿಗೆ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದಾರೆ. ಹೌದು ಕೃಷ್ಣ ಮತ್ತು ಬಿಂದುಪ್ರಿಯಾ ಎಂಬ ದಂಪತಿಯ ನವಜಾತ ಗಂಡು ಮಗುವಿನಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ. ಆದ್ರೆ ಅದರ ಚಿಕಿತ್ಸೆಗೆ ಬೇಕಾದಷ್ಟು ಹಣ ಹೊಂದಿಸುವ ಶಕ್ತಿ ಆ ಮಗುವಿನ ತಂದೆಗೆ ಇರಲಿಲ್ಲ. ಹೀಗಾಗಿ ಅವರಿಗೆ ಸೋನು ಸೂದ್ ಸಹಾಯಾಸ್ತ ಚಾಚಿದ್ದು ಮತ್ತೊಮ್ಮೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವೈದ್ಯಕೀಯ ಚಿಕಿತ್ಸೆಗೆ ಸುಮಾರು 6 ಲಕ್ಷ ರೂಪಾಯಿಗಳ ಅಗತ್ಯತೆ ಇತ್ತು. ಈ ಬಗ್ಗೆ ಆಂಧ್ರದ ಜನ ವಿಜ್ಞಾನ ವೇದಿಕೆಯ ಪ್ರತಿನಿಧಿಗಳು ಸೋಷಿಯಲ್ ಮೀಡಿಯಾ ಮೂಲಕ ಸೋನು ಸೂದ್ ಅವರನ್ನ ಸಂಪರ್ಕಿಸಿ ಸಹಾಯ ಕೋರಿದ್ದರು. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಸೋನು ದಂಪತಿ ಹಾಗೂ ಮಗುವನ್ನ ಮುಂಬೈಗೆ ಕರೆತಂದು ವಾಡಿಯಾ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದಾರೆ. ಶಸ್ತ್ರ ಚಿಕಿತ್ಸೆಯು ಕೂಡ ಯಶಸ್ವಿಯಾಗಿ ನೆರವೇರಿದೆ. ಇನ್ನೂ ಮಗುವಿನ ತಂದೆತಾಯಿ ಸೋನು ಅವರ ಸಹಾಯಕ್ಕೆ ಧನ್ಯವಾದಗಳನ್ನ ತಿಳಿಸಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ನಟನ ಗುಂಡೇಟಿಗೆ ಬಲಿಯಾದ ಛಾಯಾಗ್ರಾಹಕಿ
ಸಲಗಕ್ಕೆ ಎದುರಾದ ಸಂಕಷ್ಟ ದೂರ – ಸಲಗ ತುಳಿಯುವ ಪ್ರಯತ್ನ ಬಿಡಿ ಎಂದ ದುನಿಯಾ ವಿಜಯ್