ನಾಳೆ ಉಡಾವಣೆಯಾಗಲಿದೆ ಪಿಎಸ್‌ಎಲ್‌ವಿ-ಸಿ 52 ರಾಕೆಟ್ Saaksha Tv
ಚೆನ್ನೈ(ತಮಿಳುನಾಡು): ಪಿಎಸ್‌ಎಲ್‌ವಿ-ಸಿ 52 ರಾಕೆಟ್ ಅನ್ನು ನಾಳೆ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಈ ರಾಕೇಟ್ ಉಡಾವಣೆ ಮಾಡಲಿದ್ದು, ಇದರಲ್ಲಿ ಭೂ ವೀಕ್ಷಣಾ ಉಪಗ್ರಹದಲ್ಲಿ INSPIREsat-1 ಮತ್ತು INS-2TD ಸೇರಿದಂತೆ ಒಟ್ಟು ಮೂರು ಸಣ್ಣ ಉಪಗ್ರಹಗಳಿರಲಿವೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆ 5.59ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಮೊದಲ ಉಡಾವಣಾ ಪ್ಯಾಡ್‌ನಿಂದ ಉಡಾವಣೆಗೊಳ್ಳಲಿದೆ.
ಈ ರಾಕೆಟ್ ಮೂಲಕ ಎರಡು ದೇಶದ ರಾಡಾರ್ ಇಮೇಜಿಂಗ್ ಉಪಗ್ರಹವಾದ RISAT-1A ಅನ್ನು ಉಡಾವಣೆ ಮಾಡಲಾಗುತ್ತದೆ. ಈಗ RISAT-1A ಉಪಗ್ರಹವನ್ನು ಭೂ ವೀಕ್ಷಣಾ ಉಪಗ್ರಹ-04 (Earth Observation Satellite-04) ಎಂದು ನಾಮಕರಣ ಮಾಡಲಾಗಿದೆ.
ಈ ಉಪಗ್ರಹವು ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಷನ್ಗಳಿಗಾಗಿ ಕೆಲಸ ಮಾಡಲಿದೆ. ಎಂಥಹದ್ದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕೂಡಾ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ಈ ಉಪಗ್ರಹ ವಿನ್ಯಾಸ ಮಾಡಲಾಗಿದೆ.