ಕೊರೊನಾ ಹರಡದಂತೆ ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಜೊತೆಗೆ ಹೊರ ರಾಜ್ಯದಿಂದ ಬರುವವರಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ವಿದೇಶದಿಂದ ಬರುವವರನ್ನು 15 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಅದಕ್ಕಾಗಿ ವಿದೇಶದಿಂದ ಬಂದವರನ್ನು ಗುರುತಿಸಲು ಸೀಲ್ ಹಾಕುವ ಪ್ಲ್ಯಾನ್ ಮಾಡಿತ್ತು. ಸೀಲ್ ಹಾಕುವ ಮೂಲಕ ವಿದೇಶದಿಂದ ಬಂದವರು ಯಾವ ದಿನದಿಂದ ಯಾವ ದಿನಾಂಕದವರೆಗೂ ಕ್ವಾರಂಟೈನ್ ನಲ್ಲಿ(ಗೃಹ ದಿಗ್ಬಂಧನ) ಇರಬೇಕು ಎಂದು ಹೇಳಿತ್ತು. ಕೊರೋನಾ ಪೀಡಿತರಿಲ್ಲದವರ ಸುರಕ್ಷಿತೆಗಾಗಿ ಇದನ್ನ ಪಾಲಿಸಬೇಕಿದೆ ಎಂದು ಸರ್ಕಾರ ಹೇಳಿತ್ತು. ಇದೀಗ ಹಾಕಿರುವ ಸೀಲ್ ಎಷ್ಟರಮಟ್ಟಿಗೆ ಪರಿಣಾಮಾಕಾರಿ ಎನ್ನುವ ಪ್ರಶ್ನೆ ಕಾಡುತ್ತಿದೆ. ಹೌದು Proud to Protect Bengaluru ಮತ್ತು ದಿನಾಂಕ ನಮೂದಿಸಿದ ಸೀಲ್ ಅಳಿಸಿ ಹೋಗುತ್ತಿದಿಯಂತೆ. ಹಾಗಾಂತ ಸ್ವತಃ ಸೀಲ್ ಹಾಕಿಸಿಕೊಂಡವರೇ ಪೋಟೋ ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ. ಅಲ್ಲದೆ ಮಾರ್ಚ್ 21 ಕ್ಕೆ ಹಾಕಿರುವ ಸೀಲ್, ಮಾರ್ಚ್ 23ಕ್ಕೆ ಅಳಸಿ ಹೋಗಿದೆ. ಇದರಿಂದಾಗಿ ಆರೋಗ್ಯ ಇಲಾಖೆ ಮಾಡುತ್ತಿರುವ ಎಡವಟ್ಟು ಕಂಡು ಬಂದಿದೆ.
ಕಾಂಗ್ರೆಸ್ ಮೈತ್ರಿ ಮುರಿದ ಡಿಎಂಕೆ: ಸಂಸತ್ತಿನಲ್ಲಿ ಪ್ರತ್ಯೇಕ ಆಸನಕ್ಕೆ ಕನ್ನಿಮೋಳಿ ಪತ್ರ
ದಕ್ಷಿಣ ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಹೊಡೆತ ಬಿದ್ದಿದೆ. ಕೇರಳದಲ್ಲಿ ಜಯಭೇರಿ ಬಾರಿಸಿ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್‌ಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ದೊಡ್ಡ...








