ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರೀಡೆ

FIFA 2026 : ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?

admin by admin
June 23, 2026
in ಕ್ರೀಡೆ, Newsbeat, Sports
fifa wolrd cup football 2026

fifa wolrd cup football 2026

Share on FacebookShare on TwitterShare on WhatsappShare on Telegram

FIFA 2026 : ಅದು ಹಚ್ಚ ಹಸಿರಿನ ಹೈಬ್ರಿಡ್ ಹುಲ್ಲು ಹಾಗೂ ಸ್ವಲ್ಪ ಕೃತಕ ಪ್ಲಾಸ್ಟಿಕ್ ನಾರುಗಳಿಂದ ಸಿದ್ದಗೊಂಡಿರುವ ಆಯತಾಕಾರದ ವಿನ್ಯಾಸದ ಫುಟ್‍ಬಾಲ್ ಮೈದಾನ. 105 ಮೀಟರ್ ಉದ್ದ, 68 ಮೀಟರ್ ಅಗಲವನ್ನು ಹೊಂದಿರುವ ಫಿಫಾ ವಿಶ್ವಕಪ್ ಮೈದಾನದ ಒಟ್ಟು ವಿಸ್ತೀರ್ಣ 7,140 ಚದರ ಮೀಟರ್. ಅಂದ್ರೆ ಸುಮಾರು 1.76 ಎಕರೆಯ ಈ ರಂಗಮಂಟಪದಲ್ಲಿ ಪರಮ ಸುಂದರಿ ಜೊತೆ ಸರಸ -ವಿರಸವಾಡುತ್ತಾ ಆಡುವ ಆಟಗಾರರ ರಣ ರೋಚಕ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಹೌದು, 22 ಸೆಂಟಿಮೀಟರ್ ವ್ಯಾಸ ಹೊಂದಿರುವ ಈ ದುಂಡನೆಯ ಕಾಯದ ವೈಯಾರದ ಚೆಂಡು 22 ಆಟಗಾರರ ಕಾಲಿನ ಸ್ಪರ್ಶಕ್ಕೆ ನರ್ತಿಸುವ ಮಾಯಾಂಗನೆಯೂ ಹೌದು. ಪ್ರೇಯಸಿ ಪ್ರೇಮಿಯ ಕೈ ಹಿಡಿದು ನಡೆದಂತೆ ಆಟಗಾರನ ಕಾಲಿಗೆ ಅಂಟಿಕೊಂಡು ಸಾಗುವ ಮುಗುದೆಯೂ ಹೌದು. ಆಟಗಾರರನ ಪಾದದ ರಸಮಯ ಒಡನಾಟಕ್ಕೆ ಜಿಗಿ ಜಿಗಿದು ಓಡಾಡುವ ರೂಪಸಿಯೂ ಹೌದು. ಮುದ್ದಾಟ ಮಾಡುವ ಆಟಗಾರನ ತಾಳಕ್ಕೆ ತಕ್ಕಂತೆ ಕುಣಿಯುವ ನಾಟ್ಯಗಾರ್ತಿಯೂ ಹೌದು. ಆಟಗಾರ ಒದ್ದಾಗ ಬೆದರಿ ನಭಕ್ಕೆ ಹಾರುವ ಮಾಯಾವಿನಿಯೂ ಹೌದು.

Related posts

CM ಪಟ್ಟದ ಫೈಟ್ : 3 ವರ್ಷದ ಅಭಿವೃದ್ಧಿ ಮಂತ್ರ ಪಠಿಸಿದ ಮುಖ್ಯಮಂತ್ರಿ

ರಾಜೀನಾಮೆಯ ಬಳಿಕ ವಿಶ್ರಾಂತಿಗೆ ಮಾಜಿ ಸಿಎಂ ಸಿದ್ದರಾಮಯ್ಯ; ಕೇರಳದ ರೆಸಾರ್ಟ್‌ಗೆ ಭೇಟಿ

June 24, 2026
ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

June 24, 2026

ಗಡಿ ದಾಟಿದಾಗ ರೆಫ್ರಿಯ ವಿಶಿಲ್‍ಗೆ ಓಗೊಟ್ಟು ಮರಳಿ ಬರುವ ಮೋಹಿನಿಯೂ ಹೌದು. ಆಟಗಾರರ ಶಕ್ತಿ – ಸಾಮಥ್ರ್ಯವನ್ನು ಪರೀಕ್ಷೆ ಮಾಡುವ ಮಾಟಗಾತಿಯೂ ಹೌದು. ಕ್ಷಣ ಕ್ಷಣಕ್ಕೂ ಮನಸು ಬದಲಾಯಿಸುವ ಚಂಚಲೆ ಚೆಲುವೆಯೂ ಹೌದು. ಆಟಗಾರ ಕಾಲಿನಿಂದ ರಭಸವಾಗಿ ಒದ್ದಾಗ ನೋವನ್ನು ಮರೆತು ಪ್ರೀತಿಯಿಂದ ಗೂಡು ಸೇರುವ ಗುಪ್ತಗಾಮಿನಿಯೂ ಹೌದು.

ಗೆಲುವಿಗಾಗಿ ಮೈದಾನದಲ್ಲಿ ಹೋರಾಡುವ ಆಟಗಾರರ ಬೆವರಿಳಿಸುವ ಬುದ್ದಿವಂತ ಚತುರೆಯೂ ಹೌದು. ಕಾವಲುಗಾರನ ಹದ್ದಿನ ಕಣ್ಣು ತಪ್ಪಿಸಿ ಮೋಹದ ಬಲೆಯೊಳಗೆ ಬೀಳುವ ಬಳುಕುವ ಬೆಡಗಿಯೂ ಹೌದು. ಹಾಗೇ ಕಾವಲುಗಾರನ ಕೈಗೆ ಸಿಲುಕಿದ್ರೂ ಮತ್ತೆ ಮತ್ತೆ ಆಟವಾಡಿಸುವ ಜಾಣೆಯೂ ಹೌದು.

ಕೋಪ -ತಾಪ, ಸರಸ-ವಿರಸ, ಸಿಟ್ಟು -ಆವೇಶದ ನಡುವೆ ಆಟಗಾರ ಒದೆಯುವ ಏಟಿಗೆ ತಿರುಗೇಟು ನೀಡುವ ರಾಕ್ಷಸಿಯೂ ಹೌದು. ಯಾರ ಪ್ರೀತಿ, ಒಲವು ಸಿಗದೇ ಮೈದಾನದಲ್ಲಿ ಅಲೆದಾಡುವ ಭಗ್ನಪ್ರೇಮಿಯೂ ಹೌದು. ಒಡಲಲ್ಲಿ ಡಿಜಿಟಲ್ ಹೃದಯವನ್ನಿಟ್ಟುಕೊಂಡು ಆಟಗಾರರ ಪ್ರತಿ ಸ್ಪರ್ಶವನ್ನು ಲೆಕ್ಕವಿಡುವ ಹಾಗೂ ತಪ್ಪು- ಸರಿ ನಿರ್ಧಾರ ಮಾಡುವ ಅಂತರ್ಯಾಮಿಯೂ ಹೌದು.

ಕೋಟ್ಯಂತರ ಅಭಿಮಾನಿಗಳನ್ನು ಸಮ್ಮೋಹನಗೊಳಿಸುವ ಅಪ್ರತಿಮ ಸೌಂದರ್ಯವತಿಯೂ ಹೌದು. 90 ನಿಮಿಷಗಳ ಕಾಲ ತನ್ನ ಮಾಯಾಜಾಲದ ಮೂಲಕ ಜಗತ್ತನ್ನೇ ಮೋಡಿ ಮಾಡಿ ಸೆಳೆಯುವ ನಿಗೂಢ ಅಂದಗಾರ್ತಿಯೂ ಹೌದು. ಅಷ್ಟಕ್ಕೂ ಈ ಪರಮಸುಂದರಿಯ ಸೈಜ್ ಅನ್ನು ಎ5 ಎಂದು ಕರೆಯಲಾಗುತ್ತದೆ. ಕೇªಲ 430 ಗ್ರಾಮ್ ತೂಕದ ಹಗುರ ಕಾಯ. 69ಸೆಂಟಿಮೀಟರ್ ಅಂದ್ರೆ 27.2 ಇಂಚು ಸುತ್ತಳತೆ ಹೊಂದಿದ್ದರೂ ಅಯಸ್ಕಾಂತದಂತೆ ತನ್ನತ್ತ ಸೆಳೆಯುವ ಜಾದುಗಾರ್ತಿಯೂ ಹೌದು.

ಕೊನೆಯದಾಗಿ ಕೋಟಿ ಕೋಟಿ ಕಂಗಳ ಒಡತಿಯಾಗಿರುವ ಈಕೆಯ ಅಂದ ಚೆಂದ, ಬೆಡಗು ಬಿನ್ನಾಣಕ್ಕೆ ಮನಸೋಲದವರಿಲ್ಲ. ಮಾಯಾಜಾಲಕ್ಕೆ ಬೀಳದವರಿಲ್ಲ. 90 ನಿಮಿಷಗಳ ಆಟ ಮುಗಿದಾಗ ಮೈದಾನ ಖಾಲಿ ಖಾಲಿಯಾಗಬಹುದು.. ಸೋಲಿನ ನೋವು, ಗೆಲುವಿನ ಖುಷಿಯಲ್ಲಿ ಆಟಗಾರರು, ಅಭಿಮಾನಿಗಳು ಮನೆ ಸೇರಬಹುದು. ಆದ್ರೆ ಈಕೆಗೆ ಬಿಡುಗಡೆಯೂ ಇಲ್ಲ..ಆಕೆಯ ಮೋಡಿಗೆ ಕೊನೆಯೂ ಇಲ್ಲ. ಯಾಕಂದ್ರೆ ಆಕೆ ಬರೀ ಹಸಿರು ರಂಗಮಂಟಪದ ಅದೃಶ್ಯ ಸೂತ್ರಧಾರಿಯಲ್ಲ. ಬದಲಾಗಿ ಫುಟ್‍ಬಾಲ್ ಜಗತ್ತಿನ ಅಪ್ರತಿಮ ಮಹಾರಾಣಿ. Queen Of Football World

ಸನತ್ ರೈ

Tags: FIFA 2023FIFA 2026Queen Of Football World
ShareTweetSendShare
Join us on:

Related Posts

CM ಪಟ್ಟದ ಫೈಟ್ : 3 ವರ್ಷದ ಅಭಿವೃದ್ಧಿ ಮಂತ್ರ ಪಠಿಸಿದ ಮುಖ್ಯಮಂತ್ರಿ

ರಾಜೀನಾಮೆಯ ಬಳಿಕ ವಿಶ್ರಾಂತಿಗೆ ಮಾಜಿ ಸಿಎಂ ಸಿದ್ದರಾಮಯ್ಯ; ಕೇರಳದ ರೆಸಾರ್ಟ್‌ಗೆ ಭೇಟಿ

by Shwetha
June 24, 2026
0

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ತಮ್ಮ ಆಪ್ತರೊಂದಿಗೆ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ...

ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

by Shwetha
June 24, 2026
0

ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ರಾಜಕೀಯ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಯೋಜನೆ ಬೆಂಬಲಿಸುವ ಶಾಸಕರಿಗೆ ನಿವೇಶನ...

ಪ್ರೀತಿಯ ನಾಟಕವಾಡಿ ಭಾವಿ ಪತಿಯನ್ನೇ ಕಂದಕಕ್ಕೆ ತಳ್ಳಿದ ಕ್ರೂರಿ: ಮದುವೆ ಮಂಟಪ ಏರಬೇಕಿದ್ದ ವರ ಈಗ ಹೆಣ!;ಪ್ರಿಯಕರನ ಜೊತೆಗೂಡಿ ನಿಶ್ಚಿತಾರ್ಥದ ಯುವತಿ ನಡೆಸಿದ ಹೈಟೆಕ್ ಸ್ಕೆಚ್ ಬಯಲು.

ಪ್ರೀತಿಯ ನಾಟಕವಾಡಿ ಭಾವಿ ಪತಿಯನ್ನೇ ಕಂದಕಕ್ಕೆ ತಳ್ಳಿದ ಕ್ರೂರಿ: ಮದುವೆ ಮಂಟಪ ಏರಬೇಕಿದ್ದ ವರ ಈಗ ಹೆಣ!;ಪ್ರಿಯಕರನ ಜೊತೆಗೂಡಿ ನಿಶ್ಚಿತಾರ್ಥದ ಯುವತಿ ನಡೆಸಿದ ಹೈಟೆಕ್ ಸ್ಕೆಚ್ ಬಯಲು.

by Shwetha
June 24, 2026
0

ಮಹಾರಾಷ್ಟ್ರದ ಪುಣೆ ಸಮೀಪದ ಲೋಹಗಡ್ ಕೋಟೆಯಲ್ಲಿ ನಡೆದಿದ್ದ ಭೀಕರ ಘಟನೆಯೊಂದು ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ಆರಂಭದಲ್ಲಿ...

ಸ್ಟಾಲಿನ್ ಶೈಲಿಯಲ್ಲೇ DMKಗೆ ತಿರುಗೇಟು ನೀಡಿದ ಸಿಎಂ ವಿಜಯ್

ಸ್ಟಾಲಿನ್ ಶೈಲಿಯಲ್ಲೇ DMKಗೆ ತಿರುಗೇಟು ನೀಡಿದ ಸಿಎಂ ವಿಜಯ್

by Shwetha
June 24, 2026
0

ತಮಿಳುನಾಡು ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರದ ನಡುವೆ ಮುಖ್ಯಮಂತ್ರಿ ವಿಜಯ್ ಅವರು DMK ನಾಯಕರ ವಿರುದ್ಧ ತಿರುಗೇಟು ನೀಡಿದ್ದಾರೆ. TVK ಸರ್ಕಾರವನ್ನು...

ನಾಲ್ಕು ಪ್ರಕಾಶ್ ರಾಜ್ ಗಳ ಹೋರಾಟದ ಕಥೆ ಬಿಚ್ಚಿಟ್ಟ ಸೂಲಿಬೆಲೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್

ನಾಲ್ಕು ಪ್ರಕಾಶ್ ರಾಜ್ ಗಳ ಹೋರಾಟದ ಕಥೆ ಬಿಚ್ಚಿಟ್ಟ ಸೂಲಿಬೆಲೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್

by Shwetha
June 24, 2026
0

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ದೇಶದ ನಾಲ್ಕು ಬೇರೆ ಬೇರೆ ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram