ಭಾರತದ ಯುವ ಬ್ಯಾಡ್ಮಿಂಟನ್ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇತಿಹಾಸ ಬರೆದಿದ್ದಾರೆ.
ಜಕಾರ್ತಾದಲ್ಲಿ ನಡೆದ ಬ್ಯಾಡ್ಮಿಂಟನ್ ಸೂಪರ್ 1000 ಫೈನಲ್ ನಲ್ಲಿ ಪ್ರಶಸ್ತಿಯನ್ನು ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಮತ್ತು ಕಳೆದ ವರ್ಷ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದಿದ್ದ ವಿಶ್ವದ ನಂ.6 ಜೋಡಿ, ಜಕಾರ್ತದಲ್ಲಿ ನಡೆದ 2 ಗೇಮ್ ಗಳ ಅದ್ಭುತ ಹೋರಾಟದಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕಾ ಸೋಲಿಸಿದ್ದಾರೆ.
ಇಂಡೋನೇಷ್ಯಾ ಓಪನ್ ನ ಪುರುಷರ ಡಬಲ್ಸ್ ಫೈನಲ್ ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ, ಮಲೇಷ್ಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಅವರನ್ನು 21-17, 21-18 ರಿಂದ ಸೋಲಿಸಿದರು. ನಿಧಾನಗತಿಯ ಆರಂಭವನ್ನು ಪಡೆದರೂ ಭಾರತೀಯ ಜೋಡಿ ನೇರ ಗೇಮ್ ಗಳಲ್ಲಿ ಪಂದ್ಯವನ್ನು ಗೆದ್ದಿದ್ದಾರೆ. ಭಾರತದ ಜೋಡಿ ತಮ್ಮ ಮೊದಲ ಸೂಪರ್ 1000 ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದರು.








