ಮಾಲ್ಗಳಲ್ಲಿ, ಸೂಪರ್ ಮಾರ್ಕೆಟ್ ಗೆ ಹೋದ ಸಂದರ್ಭದಲ್ಲಿ ಹಲವಾರು ಘಟನೆಗಳು ನಮ್ಮ ಮುಂದೆ ಬಂದಿರುತ್ತವೆ. ಆದರೆ, ಇಲ್ಲೊಬ್ಬ ಬಾಲಕಿ ಈಗ ಫ್ರಿಡ್ಜ್ ತೆರೆಯಲು ಹೋಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದ್ನ ನಿಜಾಮಾಬಾದ್ ಜಿಲ್ಲೆಯ ನವಿಪೇಟೆ ಮಂಡಲದ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದ್ದು, ರಿಷಿತಾ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ರಿಷಿತಾ ತನ್ನ ತಂದೆಯೊಂದಿಗೆ ಮಾರ್ಕೆಟ್ ಗೆ ಹೋಗಿದ್ದಳು.
ರಾಜಶೇಖರ್ ಫ್ರಿಡ್ಜ್ವೊಂದರಲ್ಲಿ ಇರುವ ಐಸ್ಕ್ರೀಮ್ಗಳನ್ನು ನೋಡುತ್ತಿದ್ದರು. ಆಗ ಪುತ್ರಿ ರಿಷಿತಾ ಪಕ್ಕದಲ್ಲಿ ಇನ್ನೊಂದು ಫ್ರಿಡ್ಜ್ನಲ್ಲಿರುವ ಚಾಕೊಲೇಟ್ಗಳಿಂದ ಹೆಚ್ಚು ಆಕರ್ಷಿತಳಾಗಿದ್ದಳು. ಆಗ ಹೋಗಿ ಫ್ರಿಡ್ಜ್ ತೆರೆಯುತ್ತಿದ್ದಂತೆ ವಿದ್ಯುತ್ ತಗುಲಿದೆ. ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಘಟನೆ ಸೂಪರ್ ಮಾರ್ಕೆಟ್ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.