ಯುಪಿಎಸ್ ಸಿ ಪುರ್ವಭಾವಿ ಪರಿಕ್ಷೆಗಳ (ಪ್ರಿಲಿಮ್ಸ್) ರಿಸಲ್ಟ್ ಬಿಡುಗಡೆಯಾಗಿದೆ.
ಕೇಂದ್ರಲೊಕ ಸೇವಾ ಆಯೋಗ ನಡೆಸುವ ಸಿವಿಲ್ಸ್ ಸೇವೆಗಳ ಯುಪಿ ಎಸ್ ಸಿ ಪ್ರಿಲಿಮ್ಸ್ (ಪುರ್ವಬಾವಿ ) ಪರಿಕ್ಷೆಯ ರಿಸಲ್ಟ್ ನಿನ್ನೆ ಬಿಡುಗಡೆಯಾಗಿದೆ. ಅಕ್ಟೋಬರ್ 10 ತರೀಖಿನಂದು ಪ್ರಿಲೀಮ್ಸ್ ಎಕ್ಸಾಮ್ ಜರುಗಿತ್ತು..
ಯುಪಿಎಸ್‌ಸಿ ಸಿವಿಲ್ ಸೇವೆಗಳ ಮುಖ್ಯ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್ ಅನ್ನು ಆಯೋಗವು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳ ರಿಜಿಸ್ಟರ್ ನಂಬರ್ ಅನ್ನು ನೀಡಲಾಗಿದೆ.
ರಿಸಲ್ಟ್ ನೋಡಲು upsc.gov.in ಗೆ ಭೇಟಿ ನೀಡಿರಿ.
– ಓಪನ್ ಆದ ಹೋಮ್‌ಪೇಜ್‌ನ ಬಲಭಾಗದಲ್ಲಿ ಸ್ಕ್ರಾಲಿಂಗ್ ಆಗುತ್ತಿರುವ ಲೇಟೆಸ್ಟ್ ನೋಟಿಸ್‌ಗಳ ಲಿಸ್ಟ್‌ನಲ್ಲಿ ‘Civil Services (Preliminary) Examination, 2021 Result’ ಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿರಿ.
ಮತ್ತೊಂದು ಯುಪಿಎಸ್‌ಸಿ ಪೇಜ್ ಓಪನ್ ಆಗುತ್ತದೆ. ಇಲ್ಲಿ ರಿಸಲ್ಟ್‌ನ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ. ಫಲಿತಾಂಶ ಪಿಡಿಎಫ್ ಓಪನ್ ಆಗುತ್ತದೆ. ಮುಖ್ಯ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳ ರಿಜಿಸ್ಟರ್ ನಂಬರ್ ಅನ್ನು ಏರಿಕೆ ಕ್ರಮದಲ್ಲಿ ನೀಡಲಾಗಿರುತ್ತದೆ. ಅಭ್ಯರ್ಥಿಗಳು ಸ್ಕ್ರಾಲ್ ಮಾಡುವ ಮೂಲಕ ಚೆಕ್ ಮಾಡಬಹುದು.
ಈ ಪಿಡಿಎಫ್‌ನಲ್ಲಿ ನೀಡಲಾದ ರಿಜಿಸ್ಟರ್ ನಂಬರ್‌ನ ಅಭ್ಯರ್ಥಿಗಳು ಸಿಎಸ್‌ಇ ಮುಖ್ಯ ಪರೀಕ್ಷೆಗೆ ಅರ್ಹರು. ಪರೀಕ್ಷೆ ಬರೆದು ಈ ಲಿಸ್ಟ್‌ನಲ್ಲಿ ರಿಜಿಸ್ಟರ್ ಪಡೆಯದ ಅಭ್ಯರ್ಥಿಗಳು ಪ್ರಿಲಿಮ್ಸ್ ಪರೀಕ್ಷೆ ಪಾಸ್ ಮಾಡಿಲ್ಲ ಎಂದರ್ಥ.








