ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಸಾವು..!
ಹಾವೇರಿ : ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಮೃತಪಟ್ಟಿರುವ ಘಟನೆ ಹಾವೇರಿಯ ನೆಗಳೂರು ಗ್ರಾಮದಲ್ಲಿ ನಡೆದಿದೆ.
70ವರ್ಷದ ಮುರೋಳ ಗ್ರಾಮದ ಶಿವಗಂಗಮ್ಮ ಸುಟಮನಿ ಮೃತ ದುರ್ದೈವಿಯಾಗಿದ್ದಾರೆ.
ನೆಗಳೂರು ವೃದ್ಧೆಯ ತವರೂರಾಗಿದ್ದು, ಕಳೆದ 20 ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದರು. ಹೀಗೆ ತವರಿಗೆ ಬಂದಿದ್ದ ವೃದ್ಧೆ ಇದೀಗ ಮನೆಯ ಮೇಲ್ಛಾವಣಿ ಬಿದ್ದು ಸಾವನ್ನಪ್ಪಿದ್ದಾರೆ.
ಮೇಲ್ಛಾವಣಿ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನ ಮೊದಲು ಗುತ್ತಲದ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ,
ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಣೇಬೆನ್ನೂರಿನ ನಂದಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಿಸದೆ ಅಜ್ಜಿ ಮೃತಪಟ್ಟಿದ್ದಾರೆ.