ಬಾಗಲಕೋಟೆ: ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಅಕ್ಕ (Sister), ತಮ್ಮ (Brother) ಸಾವನ್ನಪ್ಪಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಇಳಕಲ್ ತಾಲೂಕಿನ (Ilkal) ಕಂದಗಲ್ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಅಪ್ರಾಪ್ತರಾದ ಗೀತಾ ಈಶ್ವರಯ್ಯ ಆದಾಪುರಮಠ(14) ಹಾಗೂ ಆಕೆಯ ಸಹೋದರ ರುದ್ರಯ್ಯ(10) ಸಾವನ್ನಪ್ಪಿದ್ದಾರೆ. ವಯೋವೃದ್ಧ ಅಜ್ಜಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಂದೆ, ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳು ಹಾಗೂ ಅಜ್ಜಿ ಮನೆಯಲ್ಲಿದ್ದರು. ಅಜ್ಜಿ ಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಮನೆಯ ಮೇಲ್ಛಾವಣಿ ಬಿದ್ದಿದೆ. ಮೊಬೈಲ್ ನೋಡುತ್ತ ಕುಳಿತಿದ್ದ ಇಬ್ಬರೂ ಮಣ್ಣು, ಕಟ್ಟಿಗೆಯ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.