ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನು ಕೋರ್ಟ್ 6 ದಿನಗಳ ಕಾಲ ಎಸ್ ಐಟಿ ವಶಕ್ಕೆ ನೀಡಿದೆ.
ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ 6 ದಿನಗಳ ಕಾಲ SIT ಕಸ್ಟಡಿಗೆ ನೀಡಿದೆ. ಹೀಗಾಗಿ ಎಸ್ ಐಟಿ ಅಧಿಕಾರಿಗಳು ಪ್ರಜ್ವಲ್ ನನ್ನು ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ಆರಂಭಿಸಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದ್ದು, ಯಾವುದೇ ರೀತಿಯೂ ನಕಾರಾತ್ಮಕ ಪ್ರಜಾರ ಮಾಡಬೇಡಿ ಎಂದು ಪ್ರಜ್ವಲ್ ಪರ ವಕೀಲರು ಮಾಧ್ಯಮದವರನ್ನು ಕೋರಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಜಡ್ಜ್ ಮುಂದೆ ಪ್ರಜ್ವಲ್ ನನಗೆ ಕೊಟ್ಟಿರುವ ರೂಂ ಸರಿಯಿಲ್ಲ. ಕೆಟ್ಟ ವಾಸನೆ ಬರುತ್ತಿದ್ದು ಉಸಿರಾಟಕ್ಕೆ ತೊಂದರೆ ಆಗುತ್ತಿದೆ. ನನಗೆ ತುಂಬಾ ಹಿಂಸೆ ಆಗುತ್ತಿದೆ. ಅಲ್ಲಿ ಇರಲು ಆಗುತ್ತಿಲ್ಲ. ನನಗೆ ಎಸ್ ಐಟಿಯಿಂದ ತೊಂದರೆಯಿಲ್ಲ. ಮೀಡಿಯಾದಿಂದ ಟ್ರಯಲ್ ಶುರುವಾಗಿದೆ. ಕ್ರಿಮಿನಲ್ ರೀತಿ ಬಿಂಬಿಸುತ್ತಿದ್ದಾರೆ. ಫಲಿತಾಂಶ ನೋಡಲು ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡರು.