ಸ್ಮಾರ್ಟ್‌ವಾಚ್, ಇಯರ್‌ಬಡ್ ಬೆಲೆಯಲ್ಲಿ ಇಳಿಕೆ – ಜನಸಾಮಾನ್ಯರ ಕೈಗೆಟುಕುತ್ತಿರುವ ಉತ್ಪನ್ನಗಳು..
ಡಿಜಿಟಲ್ ವಾಚ್‌ಗಳು, ಸ್ಮಾರ್ಟ್‌ವಾಚ್‌ಗಳು, ರಿಸ್ಟ್ ಬ್ಯಾಂಡ್‌ಗಳು ಮತ್ತು ಇಯರ್‌ಬಡ್‌ಗಳಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ. ಧರಿಸಬಹುದಾದ ವಸ್ತುಗಳ ಮಾರಾಟ ಈ ವರ್ಷದ ಮೊದಲಾರ್ಧದಲ್ಲಿ 65.8% ರಷ್ಟು ಬೆಳೆದಿದೆ. ಈ ಅವಧಿಯಲ್ಲಿ ಒಟ್ಟು 3.8 ಕೋಟಿ ಧರಿಸಬಹುದಾದ ಎಲೆಕ್ಟ್ರಾನಿಕ್ಸ್ ವಸ್ತುಗಳು ಮಾರಾಟವಾಗಿವೆ. ವಿಶೇಷವೆಂದರೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಧರಿಸಬಹುದಾದ ವಸ್ತುಗಳ ಮಾರಾಟವು 113% ರಷ್ಟು ದ್ವಿಗುಣಗೊಂಡು 2.39 ಕೋಟಿಗಳಿಗೆ ತಲುಪಿದೆ.
ವೇಯರೆಬಲ್ ಡಿವೈಸ್ ಟ್ರ್ಯಾಕರ್ ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್, ರಿಸ್ಟ್ ಬ್ಯಾಂಡ್ ಗಳ ಮಾರಾಟ ಹೆಚ್ಚಳಕ್ಕೆ ಕಾರಣ ಬಿಡುಗಡೆ ಮಾಡಿದೆ. ಹೊಸ ಬಿಡುಗಡೆಗಳು, ರಿಯಾಯಿತಿಗಳು ಮತ್ತು ಆಕ್ರಮಣಕಾರಿ ಮಾರುಕಟ್ಟೆ ತಂತ್ರ ಇವುಗಳು ಬೆಲೆ ಪೈಪೋಟಿಗೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಂದ, ಡಿಜಿಟಲ್ ವಾಚ್‌ಗಳು, ಸ್ಮಾರ್ಟ್ ವಾಚ್‌ಗಳು, ರಿಸ್ಟ್ ಬ್ಯಾಂಡ್‌ಗಳು ಮತ್ತು ಇಯರ್ ಬಡ್‌ಗಳಂತಹ ಉತ್ಪನ್ನಗಳ ಬೆಲೆಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಹಾಗಾಗಿ ಇವುಗಳು ಸಾಮಾನ್ಯ ಜನರನ್ನ ವೇಗವಾಗಿ ತಲುಪುತ್ತಿವೆ.
ದೇಶದಲ್ಲಿ ಧರಿಸಬಹುದಾದ ವಸ್ತುಗಳ ಸರಾಸರಿ ಮಾರಾಟ ಬೆಲೆ (ASP) ಜೂನ್ ತ್ರೈಮಾಸಿಕದಲ್ಲಿ 7.2% ವರೆಗೆ ಕಡಿಮೆಯಾಗಿದೆ. ಸ್ಮಾರ್ಟ್ ವಾಚ್ ವಿಭಾಗದಲ್ಲಿ ಬೇಸಿಕ್ ಡಿವೈಸ್ ಗಳ ಸರಾಸರಿ ಮಾರಾಟ ಬೆಲೆ 29% ವರೆಗೆ ಕಡಿಮೆಯಾಗಿದೆ. ಸರಾಸರಿ ಬೆಲೆ ಕಳೆದ ವರ್ಷ 5,000 ರೂ.ನಿಂದ 3,500 ರೂ.ಗೆ ಇಳಿದಿದೆ. ಐಡಿಸಿ ಪ್ರಕಾರ, ದೇಶದಲ್ಲಿ ಧರಿಸಬಹುದಾದ ವಸ್ತುಗಳ ಮಾರಾಟವು ಈ ವರ್ಷ ದಾಖಲೆಯ 90 ಮಿಲಿಯನ್ ಗಡಿಯನ್ನು ದಾಟುವ ನಿರೀಕ್ಷೆಯಿದೆ.
ಕೈಗೆಟುಕುವ ಉತ್ಪನ್ನಗಳು ಮತ್ತು ಆಕ್ರಮಣಕಾರಿ ಮಾರುಕಟ್ಟೆ ತಂತ್ರ ಮತ್ತು ಹೈ ಫೈ ಶ್ರೇಣಿಯಲ್ಲಿ ಮಾತ್ರ ಲಭ್ಯವಿದ್ದ ಬ್ಲೂಟೂತ್ ಕರೆ, ಬಿಗ್ ಸ್ಕ್ರೀನ್ ಮತ್ತು AMOLED ಡಿಸ್ಪ್ಲೇಯಂತಹ ಫೀಚರ್ಸ್ಗಳು ಸಹ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರಣ ಜನತೆ ಗ್ಯಾಜೆಟ್ ಅಪ್ಗ್ರೇಡ್ ಗೆ ಮುಂದಾಗುತ್ತಿದ್ದಾರೆ.








