ಮಂಗಳೂರು : ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಆತಂಕ ಇದ್ದೆ ಇದೆ. ಆದ್ದರಿಂದಲೇ ಇನ್ನೊಬ್ಬರ ಮನೆ ಹೋಗುವುದು, ಅಥಾವ ತಮ್ಮ ಮನೆಗೆ ಬಂದವರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಎದುರಾಗಿದೆ. ಆದರೆ ಇಂತಹ ಸಂಗ್ಧಿದ ಪರಿಸ್ಥಿತಿಯಲ್ಲೂ ಉಪ್ಪಿನಂಗಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಉಡುಪಿ ಮೂಲದ ವ್ಯಕ್ತಿ ಉಪ್ಪಿನಂಗಡಿಯ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ ಡೌನ್ ಆಗಿರುವ ಕಾರಣಕ್ಕೆ ನೆಕ್ಕಿಲಾಡಿ ಎಂಬಲ್ಲಿ ವಾಸವಾಗಿದ್ದನ್ನು. ಈ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಆದರೆ ವ್ಯಕ್ತಿಯು ಜ್ವರದಿಂದ ಬಳಲುತ್ತಿದ್ದ ಎಂದು ವದಂತಿ ಹಬ್ಬಿತ್ತು. ಆ ಕಾರಣಕ್ಕೆ ಸುತ್ತಮುತ್ತಲಿನ ಜನ ಆತನ ನೆರವಿಗೆ ಬಂದಿಲ್ಲ. ಅಲ್ಲದೆ ಕೊರೊನಾ ಸೋಂಕಿನ ಬಗ್ಗೆ ಇರುವ ಭಯದಿಂದ ಸಹಾಯವನ್ನು ಸಹಾ ಮಾಡಿಲ್ಲ. ಮೃತನ ಶವವನ್ನು ಊರಿಗೆ ಸಾಗಿಸಲೂ ಆಗದೆ, ಮನೆಯವರು ಅಸಹಾಯಕರಾಗಿ ಪೊಲೀಸ್ ಠಾಣೆಯ ಬಾಗಿಲಲ್ಲಿ ಕಾಯುವ ಸ್ಥಿತಿ ಎದುರಾಯಿತು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ನೆರವಿಗೆ ಆಗಮಿಸಿದ್ದು ಉಪ್ಪಿನಂಗಡಿ ಪೊಲೀಸರು. ಠಾಣಾಧಿಕಾರಿ ಡಿ.ಎನ್ ಈರಯ್ಯರವರು ಖಾಸಗಿ ಆ್ಯಂಬುಲೆನ್ಸ್ ಚಾಲಕರೋರ್ವರ ಮನವೊಲಿಸಿ ಆತನಿಗೆ ಪಿಪಿಇ ಉಡುಪನ್ನು ಒದಗಿಸಿ, ಶವವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾದರು. ತಮ್ಮ ಬಿಡುವುರಹಿತ ಕರ್ತವ್ಯದ ಹೊರತಾಗಿಯೂ ಸದಾ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.