2020-2021ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ತರಗತಿಗಳು ಮೇ 18ರಿಂದ ಆರಂಭವಾಗಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದ ಪ್ರಥಮ ಪಿಯು ತರಗತಿಗಳ ಫಲಿತಾಂಶ ಮಾರ್ಚ್ 27ರಂದು ಪ್ರಕಟಿಸಲು ಎಲ್ಲಾ ಪಿಯು ಕಾಲೇಜುಗಳ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದು, ಮುಂದಿನ ಸಾಲಿನ ದ್ವಿತೀಯ ಪಿಯು ತರಗತಿಗಳು ಮೇ 18ರಿಂದ ಆರಂಭಿಸಲು ಸೂಚಿಸಿದೆ.
ಪ್ರಸಕ್ತ ವರ್ಷದ ಕೊನೆಯ ಕಾರ್ಯನಿರ್ವಹಣೆಯ ದಿನ ಮಾರ್ಚ್ 27 ಆಗಿದ್ದು, ಮಾರ್ಚ್ 28ರಿಂದ ಮೇ 17ರವರೆಗೆ ಬೇಸಗೆ ರಜೆ ಇರಲಿದೆ. ಮೇ 18ರಂದು ದ್ವಿತೀಯ ಪಿಯು ತರಗತಿಗಳು ಪುನರಾರಂಭವಾಗಲಿದ್ದು, ಅಷ್ಟರಲ್ಲಿ ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದರೆ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.








