ಚಾಮರಾಜನಗರ : ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆಯ ಬಂಡೀಪುರದಿಂದ 4 ಕಿ.ಮೀ ದೂರದಲ್ಲಿರುವ ಕೇರಳದ ವಯನಾಡು ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಯುವಕ ಹುಲಿ ದಾಳಿಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕೇರಳದ ವೈನಾಡು ಜಿಲ್ಲೆಯ ಪುಲ್‌ಪಳ್ಳಿ ನಿವಾಸಿ ಶಿವಕುಮಾರ್ (23) ಮೃತ ದುರ್ದೈವಿ ಕಟ್ಟಿಗೆ ಸಂಗ್ರಹಿಸಲು ಮಂಗಳವಾರ ಕಾಡಿಗೆ ತೆರಳಿದ್ದನು.
ಯುವಕ ರಾತ್ರಿಯಾದರೂ ಮರಳದ ಹಿನ್ನೆಲೆಯಲ್ಲಿ, ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಯುವಕನ ಮೃತ ದೇಹ ಪತ್ತೆಯಾಗಿದೆ. ಸದ್ಯಕ್ಕೆ ಹುಲಿ ದಾಳಿಯಿಂದ ಅಥವಾ ಬೇರಾವ ಕಾರಣದಿಂದ ಸಾವನ್ನಪ್ಪಿದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ ಬಾಲಚಂದ್ರ ಹೇಳಿದದ್ದಾರೆ.