ನಟ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿ, ಬಾಲಕ ಗಾಯಗೊಂಡ ಘಟನೆ ದೊಡ್ಡ ವಿವಾದವನ್ನೇ ಸೃಷ್ಟಿಸಿದ ನಂತರ ಈಗ ಹಾಡಿನ ವಿವಾದ ಶುರುವಾಗಿದೆ.
ಪುಷ್ಪ 2 ಚಿತ್ರದಲ್ಲಿನ ‘ಧಮ್ಮಿದ್ರೆ ಹಿಡ್ಕೋ ಬಾರೋ ಶೇಖಾವತ’ ಹಾಡಿಗೆ ಆಕ್ಷೇಪಣೆ ಬಂದಿದ್ದು, ಅಲ್ಲು ಅರ್ಜುನ್ ಹಾಡಿದ್ದ ಹಾಡನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಲಾಗಿದೆ.
ವಿಲನ್ ಭನ್ವರ್ ಸಿಂಗ್ ಶೇಖಾವತ್ (ಫಹಾದ್ ಫಾಸಿಲ್) ಮತ್ತು ಪುಷ್ಪರಾಜ್ (ಅಲ್ಲು ಅರ್ಜುನ್) ನಡುವಿನ ಸಂಘರ್ಷದ ದೃಶ್ಯಕ್ಕೆ ‘ಧಮ್ಮಿದ್ರೆ ಹಿಡ್ಕೋ ಬಾರೋ ಶೇಖಾವತ’ ಹಾಡನ್ನು ತೋರಿಸಲಾಗಿತ್ತು. ಅಲ್ಲು ಅರ್ಜುನ್ ಹಾಡಿದ್ದ ಈ ಹಾಡು ಟ್ರಿಗರ್ ಮಾಡುವ ರೀತಿಯಲ್ಲಿದೆ ಎಂದು ಆಕ್ಷೇಪಣೆ ವ್ಯಕ್ತವಾಗಿದೆ. ಶೇಖಾವತ ಸಮುದಾಯದಿಂದಲೂ ವಿರೋಧ ಬಂದ ಹಿನ್ನೆಲೆ ಈ ಹಾಡನ್ನು ಡಿಲಿಟ್ ಮಾಡಲಾಗಿದೆ.
ಸಿನಿಮಾದಲ್ಲಿ ಹಾಡು ಉಳಿಸಿಕೊಂಡಿರುವ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಡಿಲಿಟ್ ಮಾಡಿದೆ. ‘ಪುಷ್ಪ 2’ (Pushpa 2) ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಫಹಾದ್ ಫಾಸಿಲ್, ಡಾಲಿ, ಜಗಪತಿ ಬಾಬು, ತಾರಕ್ ಪೊನ್ನಪ್ಪ ಸೇರಿದಂತೆ ಹಲವರು ನಟಿಸಿದ್ದಾರೆ. ಸೇರಿದಂತೆ ಅನೇಕರು ನಟಿಸಿದ್ದಾರೆ.
ರಿಷಬ್ ಶೆಟ್ಟಿ ಅನ್ಫಾಲೋ: ಸ್ಯಾಂಡಲ್ವುಡ್ನಲ್ಲಿ ಚರ್ಚೆಗೆ ಕಾರಣ
ನಟ ರಿಷಬ್ ಶೆಟ್ಟಿ ಅವರ ಇತ್ತೀಚಿನ ನಡೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟ ರಾಜ್ ಬಿ ಶೆಟ್ಟಿ, ನಟಿ ರುಕ್ಕಿಣಿ...








