ಕೆಜಿಎಫ್ 2 ಯಶಸ್ಸಿನ ನಂತರ ನಟ ಯಶ್ ಮತ್ತೊಂದು ಯಶಸ್ಸು ಪಡೆಯಲು ಸಿದ್ಧರಾಗಿ ನಿಂತಿದ್ದಾರೆ. ಈಗ ಯಶ್ ಅವರ ಟಾಕ್ಸಿಕ್’ (Toxic Film) ಸಿನಿಮಾ ಪಯಣ ಶುರುವಾಗಿದೆ.
ಯಶ್ (Yash) ಮುಂದಿನ ಸಿನಿಮಾ ಕುರಿತು ಅಪ್ಡೇಟ್ ಸಿಕ್ಕಿದೆ. ‘ಕೆಜಿಎಫ್ 2’ (KGF 2) ಸಕ್ಸಸ್ ನಂತರ ಕನಸಿನ ಪ್ರಾಜೆಕ್ಟ್ ‘ಟಾಕ್ಸಿಕ್’ ಚಿತ್ರಕ್ಕೆ ಇಂದು (ಆ.8) ಸರಳವಾಗಿ ಚಾಲನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಆ.6ರಂದು ಉಜಿರೆಯ ಸೂರ್ಯ ದೇವಸ್ಥಾನದಲ್ಲಿ ಯಶ್ ದಂಪತಿ ಮತ್ತು ಕೋ ಪ್ರೊಡ್ಯೂಸರ್ ವೆಂಕಟ್ ಕೋಣಂಕಿ ಸ್ಟ್ರಿಪ್ಟ್ ಪೂಜೆ ಮಾಡಿದ್ದರು. ಈ ಬೆನ್ನಲ್ಲೇ ಸರಳವಾಗಿ ಮುಹೂರ್ತ ಕಾರ್ಯಕ್ರಮ ಜರುಗಿದೆ. ಈ ಸಂದರ್ಭದಲ್ಲಿ ಹಾಲಿವುಡ್ ತಂತ್ರಜ್ಞರು ಮತ್ತು ಚಿತ್ರತಂಡ ಹೊರತಾಗಿ ಬೇರೆ ಗಣ್ಯರಿಗೆ ಅವಕಾಶವಿರಲಿಲ್ಲ.
ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ. ಯಶ್ ನಟನೆಯ ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಯಶ್ ಹೊಸ ಸಿನಿಮಾದ ಶೂಟಿಂಗ್ ಗೆ ಚಾಲನೆ ಸಿಕ್ಕಿರುವ ವಿಷಯ ತಿಳಿದು ಖುಷಿ ಆಗಿದ್ದಾರೆ. ಹೀಗಾಗಿ ಅಭಿಮಾನಿಗಳು ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.
ಕೆಜಿಎಫ್ 2 ಸೂಪರ್ ಸಕ್ಸಸ್ ನಂತರ ಅಂದರೆ 3 ವರ್ಷಗಳ ಬಳಿಕ ಟಾಕ್ಸಿಕ್ ಸಿನಿಮಾದಿಂದ ಯಶ್ ಬರುತ್ತಿದ್ದಾರೆ. ಅಭಿಮಾನಿಗಳಲ್ಲಿ ಹಾಗೂ ಚಂದನವನದ ಅಂಗಳದಲ್ಲಿ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.