ಶಾಕ್ ಕೊಟ್ಟ ಷೇರುಪೇಟೆ – 3 ದಿನದಲ್ಲಿ 11 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು…

1 min read

ಶಾಕ್ ಕೊಟ್ಟ ಷೇರುಪೇಟೆ – 3 ದಿನದಲ್ಲಿ 11 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು…

ದುರ್ಬಲ ಜಾಗತಿಕ ಸೂಚ್ಯಂಕಗಳು ಮತ್ತು ವಿದೇಶಿ ಹೂಡಿಕೆದಾರರ ಮಾರಾಟದಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಸಂಕಟಕ್ಕೆ ಸಿಲಿಕಿದೆ.  ಸತತ ಮೂರು ದಿನಗಳಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಕುಸಿತದೊಂದಿಗೆ ಕೊನೆಗೊಳ್ಳುತ್ತಿವೆ. ಹೂಡಿಕೆದಾರರು ಈ ಮೂರು ದಿನಗಳಲ್ಲಿ 11 ಲಕ್ಷ ಕೋಟಿ ರೂ ಕಳೆದುಕೊಂಡಿದ್ದಾರೆ.

ಸದ್ಯ ಷೇರುಪೇಟೆ ಕುಸಿತದ ಹಾದಿಯಲ್ಲಿದ್ದು, ಹೂಡಿಕೆದಾರರು ಭಾರೀ ನಷ್ಟವನ್ನು ಎದುರಿಸುತ್ತಿದ್ದಾರೆ. ವಾರದ ಕೊನೆಯ ದಿನವಾದ ಶುಕ್ರವಾರ, ಮುಂಬೈ ಷೇರುಪೇಟೆಯ 30-ಷೇರುಗಳ ಸೆನ್ಸೆಕ್ಸ್ 866 ಅಂಶಗಳ ಕುಸಿತದೊಂದಿಗೆ 54,835 ಕ್ಕೆ ಕೊನೆಗೊಂಡಿತು. ಅದೇ ಸಮಯದಲ್ಲಿ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಕೂಡ 272 ಅಂಶಗಳ ಕುಸಿತದೊಂದಿಗೆ 16,411 ಅಂಶಗಳಲ್ಲಿ ಕೊನೆಗೊಂಡಿತು.

ಇದಾದ ಬಳಿಕ ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರವೂ ಷೇರುಪೇಟೆಯಲ್ಲಿ ಕುಸಿತದ ಟ್ರೆಂಡ್ ಮುಂದುವರಿದಿದೆ. ಸೆನ್ಸೆಕ್ಸ್ 364 ಪಾಯಿಂಟ್ ಅಥವಾ ಶೇಕಡಾ 0.67 ರಷ್ಟು ಕುಸಿದು 54,471 ಕ್ಕೆ ಕೊನೆಗೊಂಡರೆ, ನಿಫ್ಟಿ ಸೂಚ್ಯಂಕ 109 ಪಾಯಿಂಟ್ ಅಥವಾ 0.67 ರಷ್ಟು ಕಳೆದುಕೊಂಡು 16,302 ಕ್ಕೆ ಕೊನೆಗೊಂಡಿತು. ಈ ಸುತ್ತು ಮಂಗಳವಾರವೂ ಮುಂದುವರಿದು ಹಸಿರು ಮಾರ್ಕ್‌ನಲ್ಲಿ ಆರಂಭವಾದ ನಂತರ ಸೆನ್ಸೆಕ್ಸ್ 106 ಅಂಕ ಕುಸಿದು 54,365ಕ್ಕೆ ತಲುಪಿದರೆ, ನಿಫ್ಟಿ ಸೂಚ್ಯಂಕ 62 ಅಂಕಗಳ ಕುಸಿತದೊಂದಿಗೆ 16,240ರಲ್ಲಿ ಮುಕ್ತಾಯಗೊಂಡಿತು.

ಈ ಮೂರು ದಿನಗಳ ಕುಸಿತದಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರು 11.4 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.  ಕಳೆದ ವಾರವೂ ಷೇರುಪೇಟೆಯಲ್ಲಿ ಕುಸಿತ ಕಂಡುಬಂದಿತ್ತು. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು 248.3 ಲಕ್ಷ ಕೋಟಿ ರೂ.ಗೆ ಕುಸಿದಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd