ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ಶ್ರೀಮಂತ, ರಿಲಾಯನ್ಸ್ ಇಂಡಸ್ಟ್ರೀಸ್ ಚೇರಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ 63 ವರ್ಷದ ಅಂಬಾನಿ ತನ್ನ ವಿಸ್ತಾರವಾದ ಸಾಮ್ರಾಜ್ಯವನ್ನು ನಿರ್ವಹಿಸಲು ಉತ್ತರಾಧಿಕಾರಿ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.ಮುಂದಿನ ವರ್ಷದ ಅಂತ್ಯದ ವೇಳೆಗೆ ಅನುಕ್ರಮ ಯೋಜನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಆಕಾಶ್ ಹಾಗೂ ಇಶಾ ಅಂಬಾನಿ ರಿಲಾಯನ್ಸ್ ಜಿಯೋ ಹಾಗೂ ರಿಲಾಯನ್ಸ್ ರಿಟೇಲ್ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಮತ್ತೊಬ್ಬ ಮಗ ಅನಂತ್ ಜಿಯೋ ಫ್ಲಾಟ್ಫಾರ್ಮ್ಗೆ ಸಹ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಮುಂಬೈ, ಅಗಸ್ಟ್ 15: ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ಶ್ರೀಮಂತ, ರಿಲಾಯನ್ಸ್ ಇಂಡಸ್ಟ್ರೀಸ್ ಚೇರಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಈಗ ತನ್ನ ವಿಸ್ತಾರವಾದ ಸಾಮ್ರಾಜ್ಯವನ್ನು ನಿರ್ವಹಿಸಲು ಉತ್ತರಾಧಿಕಾರಿ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ ಎಂದು ಅಂಬಾನಿ ಅವರ ಅಪ್ತ ಮೂಲಗಳು ತಿಳಿಸಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ನ ಅಧಿಕಾರವನ್ನು ವಹಿಸಿಕೊಳ್ಳುವ ನಿರೀಕ್ಷೆಯಿರುವ ಅಂಬಾನಿಯವರ ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಸೇರಿದಂತೆ ಎಲ್ಲಾ ಕುಟುಂಬ ಸದಸ್ಯರಿಗೆ ಕೌನ್ಸಿಲ್ ಸಮಾನ ಪ್ರಾತಿನಿಧ್ಯವನ್ನು ನೀಡುತ್ತದೆ.

ಈ ಕ್ರಮವು ರಿಲಯನ್ಸ್‌ನ ಉತ್ತರಾಧಿಕಾರ ಯೋಜನೆಯ ಭಾಗವಾಗಿದೆ ಮತ್ತು ಕುಟುಂಬದ ವಯಸ್ಕ ಸದಸ್ಯರು, ಮೂವರು ಮಕ್ಕಳು, ಮಾರ್ಗದರ್ಶಕರು ಮತ್ತು ಸಲಹೆಗಾರರಾಗಿ ಕಾರ್ಯನಿರ್ವಹಿಸುವ ಕುಟುಂಬದ ಹೊರಗಿನ ಸದಸ್ಯರನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.
ರಿಲಾಯನ್ಸ್ ಇಂಡಸ್ಟ್ರೀಸ್ ನಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಕೌನ್ಸಿಲ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದ್ದು, ಈ ವೇದಿಕೆಯು ಪ್ರತಿ ಶಾಖೆಗೆ ಒಪ್ಪಿದ ರೀತಿಯಲ್ಲಿ ಪ್ರಾತಿನಿಧ್ಯವನ್ನು ನೀಡುತ್ತದೆ ಮತ್ತು ಕುಟುಂಬ ಅಥವಾ ಅದರ ವ್ಯವಹಾರಗಳಿಗೆ ಸಂಬಂಧಿಸಿದ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

63 ವರ್ಷದ ಅಂಬಾನಿ ಮುಂದಿನ ವರ್ಷದ ಅಂತ್ಯದ ವೇಳೆಗೆ ಅನುಕ್ರಮ ಯೋಜನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಆಕಾಶ್ ಹಾಗೂ ಇಶಾ ಅಂಬಾನಿ ರಿಲಾಯನ್ಸ್ ಜಿಯೋ ಹಾಗೂ ರಿಲಾಯನ್ಸ್ ರಿಟೇಲ್ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಮತ್ತೊಬ್ಬ ಮಗ ಅನಂತ್ ಜಿಯೋ ಫ್ಲಾಟ್ಫಾರ್ಮ್ಗೆ ಸಹ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.








