ಕಾರವಾರ: ಡೊನೇಷನ್ ಶುಲ್ಕ (Examination Fees) ಪಾವತಿಸದಿರುವುದಕ್ಕೆ ಶಿಕ್ಷಕರು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆಯೊಂದು ನಡೆದಿದೆ.
ಪರೀಕ್ಷೆ ಬರೆಯಲು ನಿರಾಕರಿಸಿ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಹತ್ತಿರ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷಿಸಿರುವ ಈ ಘಟನೆ ಕಾರವಾರ (Karwar) ನಗರದ ಸರ್ಕಾರಿ ಅನುದಾನಿತ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ನಡೆದಿದೆ.
ಕ್ರಿಶ್ಚಿನ ಜೋಸೆಫ್ ಮಕ್ಕಳಿಗೆ ಪರೀಕ್ಷೆ ನಿರಾಕರಿಸಿದ ಶಾಲೆಯ ಮುಖ್ಯ ಶಿಕ್ಷಕಿ ಎನ್ನಲಾಗಿದ್ದು, ಫಾರ್ಮೆಟಿವ್ ಅಸೈನ್ಮೆಂಟ್ ಎಂಬ ಪರೀಕ್ಷೆ ಬರೆಯಲು 6, 7 ಮತ್ತು 8ನೇ ತರಗತಿಯ ಶುಲ್ಕ ಪಾವತಿಸದ ಮಕ್ಕಳಿಗೆ ಈ ರೀತಿ ಶಿಕ್ಷೆ ನೀಡಲಾಗಿದೆ ಎನ್ನಲಾಗಿದೆ.
ಪ್ರತಿ ಮಕ್ಕಳಿಗೆ ವರ್ಷಕ್ಕೆ 20 ಸಾವಿರ ಡೊನೇಷನ್ ಅನ್ನು ಶಾಲಾ ಆಡಳಿತ ಮಂಡಳಿಯು ಪೋಷಕರಿಂದ ಸಂಗ್ರಹಿಸುತ್ತದೆ. ಹಲವು ಜನ ಕಂತಿನ ಮೂಲಕ ನೀಡುವುದರಿಂದ ಕೆಲವು ಪೋಷಕರು ಸಂಪೂರ್ಣ ಹಣ ತುಂಬಿರಲಿಲ್ಲ. ಹೀಗಾಗಿ ಈ ರೀತಿಯ ಅಮಾನವೀಯ ವರ್ತನೆ ತೋರಿಸಿದ್ದಾರೆ ಎನ್ನಲಾಗಿದೆ.