ಪಾಕ್ – ಅಪಹರಿಸಿ ಮತಾಂತರಗೊಳಿಸಿ ಮದುವೆಯಾಗಿದ್ದ ಹದಿಹರೆಯದ ಕ್ರಿಶ್ಚಿಯನ್ ಬಾಲಕಿ ಆಶ್ರಯ ಮನೆಗೆ ಸ್ಥಳಾಂತರ teenage Christian girl
ಇಸ್ಲಾಮಾಬಾದ್, ನವೆಂಬರ್03: ಪಾಕಿಸ್ತಾನ ಎಂದಾಗ ಮೊದಲು ಮನಸ್ಸಿಗೆ ಮೂಡುವುದು ಅದೊಂದು ಪಾಪಿಗಳ ರಾಷ್ಟ್ರ ಎಂಬ ಭಾವನೆ. ಅಲ್ಲಿ ಸ್ವತಂತ್ರ ಎನ್ನುವುದು ಮರೀಚಿಕೆಯಾಗಿದ್ದು ಹೆಣ್ಣುಮಕ್ಕಳ ಶೋಷಣೆ ಸರ್ವೇ ಸಾಮಾನ್ಯವಾಗಿದೆ. teenage Christian girl
ಇತ್ತೀಚಿಗೆ ಅಲ್ಲಿ ಅಪ್ರಾಪ್ತ ವಯಸ್ಕ ಹೆಣ್ಣು ಮಗುವೊಂದನ್ನು ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿ 44 ವರ್ಷದ ವ್ಯಕ್ತಿ ಮದುವೆಯಾದ ಅನಾಗರಿಕ ಘಟನೆ ನಡೆದಿದೆ.
ಈ ಘಟನೆ ಕರಾಚಿಯಲ್ಲಿ ನಡೆದಿದ್ದು, ಹದಿಹರೆಯದ ಕ್ರಿಶ್ಚಿಯನ್ ಬಾಲಕಿಯನ್ನು 44 ವರ್ಷದ ಅಲಿ ಅಜ್ಹರ್ ಅಪಹರಿಸಿ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ, ಮದುವೆಯಾಗಿದ್ದಾನೆ.
ಇದೀಗ ಘಟನೆಯ ವಿವರ ಪಡೆದ ಸಿಂಧ್ ಹೈಕೋರ್ಟ್ ಹದಿಹರೆಯದ ಕ್ರಿಶ್ಚಿಯನ್ ಬಾಲಕಿಯನ್ನು ಆಶ್ರಯ ಮನೆಗೆ ಸ್ಥಳಾಂತರಿಸಬೇಕೆಂದು ಭಾನುವಾರ ಆದೇಶಿಸಿದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ ತಿಳಿಸಿದ್ದಾರೆ.
13 ವರ್ಷದ ಕ್ರಿಶ್ಚಿಯನ್ ಬಾಲಕಿಯನ್ನು ಕರಾಚಿಯಲ್ಲಿ ಅಲಿ ಅಜರ್ ಎಂಬ 44 ವರ್ಷದ ವ್ಯಕ್ತಿ ಅಪಹರಿಸಿದ್ದಾನೆ. ಬಾಲಕಿಗೆ ನ್ಯಾಯ ಒದಗಿಸಬೇಕೆಂದು ಮಾನವ ಹಕ್ಕುಗಳ ಸಂಘಟನೆಗಳು ಒತ್ತಾಯಿಸಿವೆ. ಆಕೆಯ ನೆರವಿಗೆ ಬಂದ ಮಾನವ ಹಕ್ಕುಗಳ ಸಂಘಟನೆಗಳ ಪ್ರಯತ್ನದಿಂದ ನ್ಯಾಯಾಧೀಶರು ಬಾಲಕಿಯನ್ನು ಆಶ್ರಯ ಮನೆಗೆ ಸ್ಥಳಾಂತರಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ಮುಂದಿನ ವಿಚಾರಣೆಯನ್ನು ನವೆಂಬರ್ 5ಕ್ಕೆ ನಿಗದಿಪಡಿಸಲಾಗಿದೆ.
ಬಾಲಕಿ ನ್ಯಾಯಾಲಯಕ್ಕೆ ಹಾಜರಾಗಿದ್ದಾಳೆ ಎಂದು ಪ್ರಕರಣದ ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಶಾರಿಕ್ ಅಹ್ಮದ್ ಸಿದ್ದಿಕಿ ಹೇಳಿದ್ದಾರೆ. ಬಾಲಕಿಯ ಬಿ-ಫಾರ್ಮ್ ಪರಿಶೀಲನೆಯಲ್ಲಿ ತಾನು ಕರೆ ಮಾಡಿದ್ದೇನೆ. ಇದು ರಾಷ್ಟ್ರೀಯ ಡೇಟಾಬೇಸ್ ಮತ್ತು ನೋಂದಣಿ ಪ್ರಾಧಿಕಾರದ ಪ್ರಕಾರ ನಿಜವಾದದ್ದು ಎಂದು ಅವರು ಹೇಳಿದ್ದಾರೆ.
ಮಥುರಾ ದೇವಸ್ಥಾನದಲ್ಲಿ ನಮಾಜ್ – ಪ್ರಕರಣ ದಾಖಲು
ಮೊದಲ ಮಾಹಿತಿ ವರದಿಯ ಪ್ರಕಾರ, ಅಕ್ಟೋಬರ್ 13 ರಂದು ಬಾಲಕಿಯ ತಂದೆ ಮತ್ತು ತಾಯಿ ಕೆಲಸದಲ್ಲಿದ್ದರು. ಬಾಲಕಿಯೂ ಸೇರಿದಂತೆ ಮೂವರು ಹೆಣ್ಣುಮಕ್ಕಳು ರೈಲ್ವೆ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿದ್ದರು ಆದರೆ ನಂತರ ಬಾಲಕಿ ಮನೆಯಿಂದ ಕಾಣೆಯಾಗಿದ್ದಾಳೆಂದು ತಿಳಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ವಿಷಯ ತಿಳಿದು ಮನೆಗೆ ಬಂದ ತಂದೆ ತಾಯಿ ನೆರೆಹೊರೆಯವರನ್ನು ವಿಚಾರಿಸಿದರು. ಆದರೆ ಅವರಿಗೆ ಮಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆ ಬಳಿಕ ಅವರು ತನ್ನ ಮಗಳನ್ನು ಅಪರಿಚಿತ ವ್ಯಕ್ತಿಗಳ ಅಪಹರಿಸಿದ್ದಾರೆ ಎಂದು ಫ್ರೀರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಅಜರ್ ತನ್ನ ಕುಟುಂಬದೊಂದಿಗೆ ಅವರ ಎದುರಿನ ಮನೆಯಲ್ಲಿ ವಾಸಿಸುತ್ತಿದ್ದು, ಅವಳನ್ನು ಅಪಹರಿಸಿ ಅವಳು 18 ವರ್ಷ ವಯಸ್ಸಿನವಳು ಎಂದು ತೋರಿಸಲು ನಕಲಿ ಕಾಗದಗಳನ್ನು ಸಿದ್ಧಪಡಿಸಿದ್ದಾನೆ ಎಂದು ಆಕೆಯ ತಾಯಿ ತಿಳಿಸಿದ್ದಾರೆ.
ಮಾನವ ಹಕ್ಕುಗಳ ಫೋಕಸ್ ಪಾಕಿಸ್ತಾನದ (ಎಚ್‌ಆರ್‌ಎಫ್‌ಪಿ) ಅಧ್ಯಕ್ಷ ನವೀದ್ ವಾಲ್ಟರ್, ಅಲ್ಪಸಂಖ್ಯಾತ ಸಮುದಾಯಗಳ ಹುಡುಗಿಯರನ್ನು, ವಿಶೇಷವಾಗಿ ಕ್ರಿಶ್ಚಿಯನ್ನರು ಮತ್ತು ಹಿಂದೂಗಳನ್ನು ಹೆಚ್ಚಾಗಿ ಗುರಿಯಾಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅಪಹರಣ, ಮತಾಂತರ ಮತ್ತು ಮದುವೆಯಾಗುವುದು ಎಲ್ಲವೂ ಒಂದೇ ದಿನದಲ್ಲಿ ನಡೆಯುವುದು ಪಾಕಿಸ್ತಾನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರ್ವೇ ಸಾಮಾನ್ಯ ವಾಗಿದೆ.
ಅಕ್ಟೋಬರ್ 27, 2020 ರ ಸಿಂಧ್ ಹೈಕೋರ್ಟ್‌ನ ವಿಚಾರಣೆಯಲ್ಲಿ ಆಕೆಯ ಎಲ್ಲಾ ದಾಖಲೆಗಳನ್ನು ವಯಸ್ಸು ಸೇರಿದಂತೆ ಬದಲಾಯಿಸಲಾಗಿದೆ ಎಂದು ಎಚ್‌ಆರ್‌ಎಫ್‌ಪಿ ಸತ್ಯ ಶೋಧನಾ ತಂಡ ಬಹಿರಂಗಪಡಿಸಿದೆ. ಆಕೆಯನ್ನು 18 ವರ್ಷ ವಯಸ್ಸಿನವಳೆಂದು ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಮುಕ್ತ ಇಚ್ಛೆ ಹೊಂದಿರುವುದಾಗಿ ಆಕೆ ಹೇಳಿರುವ ನಕಲಿ ದಾಖಲೆಗಳನ್ನು ತಯಾರಿಸಲಾಗಿದೆ.
ತಾಯಿ ಸೂಚಿಸಿದಂತೆ ಕಾನೂನು ದಾಖಲೆಗಳ ಮೇಲಿನ ಅವಳ ಚಿತ್ರವನ್ನೂ ಬದಲಾಯಿಸಲಾಗಿದೆ.
ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿದ ಆರೋಪದ ಮೇಲೆ ಪೊಲೀಸರು ಸೈಯದ್ ಅಲಿ ಅಜರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆತನ ಸಹೋದರರಾದ ಸೈಯದ್ ಶಾರಿಕ್ ಅಲಿ, ಸೈಯದ್ ಮೊಹ್ಸಿನ್ ಅಲಿ ಮತ್ತು ಸ್ನೇಹಿತ ಡ್ಯಾನಿಶ್ ಅವರನ್ನು ಬಂಧಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ
https://chat.whatsapp.com/HZ6kIJcdmq8GNeQb9URf9M
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ